ಗರ್ಭಿಣಿಯಾಗಿದ್ದಾಗ ಸೆಕ್ಸ್ ಮೇಲೆ ಆಸಕ್ತಿ ಕಳೆದುಕೊಂಡೆ: ಕರೀನಾ ಕಪೂರ್ ಖಾನ್
ಇತ್ತೀಚಿಗಷ್ಟೆ ಎರಡನೇ ಮಗುವಿಗೆ ಜನ್ಮ ನೀಡಿದ್ದ ನಟಿ ಕರೀನಾ ಕಪೂರ್ ಖಾನ್ ಸಂದರ್ಶನವೊಂದರಲ್ಲಿ ತಾವು ಗರ್ಭಿಣಿಯಾಗಿದ್ದಾಗ ಸೆಕ್ಸ್ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.

ಮುಂಬೈ: ಇತ್ತೀಚಿಗಷ್ಟೆ ಎರಡನೇ ಮಗುವಿಗೆ ಜನ್ಮ ನೀಡಿದ್ದ ನಟಿ ಕರೀನಾ ಕಪೂರ್ ಖಾನ್ ಸಂದರ್ಶನವೊಂದರಲ್ಲಿ ತಾವು ಗರ್ಭಿಣಿಯಾಗಿದ್ದಾಗ ಸೆಕ್ಸ್ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.
ಮಹಿಳೆ ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಯ ಪರಿಸ್ಥಿತಿ ಬಹುತೇಕ ಮಂದಿಗೆ ಅರ್ಥ ಆಗುವುದೇ ಇಲ್ಲ. ಆಕೆಯ ತಳಮಳ, ಭಾವನೆಗಳು, ಮಾನಸಿಕ ಉದ್ವೇಗ, ಮೂಡ್ ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಲೇ ಇರುತ್ತವೆ. ಇಂಥಾ ಸಂದರ್ಭದಲ್ಲಿ ಆಕೆಯ ಜೊತೆ ಇರುವ ಪತಿ ಇದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ ಕರೀನಾ, ತಮ್ಮ ಪತಿ ಸೈಫ್ ಅಲಿ ಖಾನ್ ತುಂಬಾ ಚೆನ್ನಾಗಿ ಹೊಂದಿಕೊಂಡರು ಎಂದು ಸೈಫ್ ಬಗ್ಗೆ ಮೆಚ್ಚುಗೆ ಮಾತನ್ನಾಡಿದ್ದಾರೆ.
ದೈನಂದಿನ ಬದುಕಿನಲ್ಲಿ ದಂಪತಿ ನಡುವೆ ಸೆಕ್ಸ್ ಬಾಂಧವ್ಯದ ಕೊಂಡಿಯಾಗಿ ಬೆಸೆಯುತ್ತದೆ ನಿಜ. ಆದರೆ ಅದು ಇಬ್ಬರೂ ಸಂಗಾತಿಗಲ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಯಾರೇ ಒಬ್ಬ ಸಂಗಾತಿಗೆ ಆ ಕ್ಷಣದಲ್ಲಿ ಸೆಕ್ಸ್ ಮಾಡಲು ಆಸಕ್ತಿ ಇಲ್ಲದೇ ಹೋದಲ್ಲಿ ಮತ್ತೊಬ್ಬರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ದಾಂಪತ್ಯ ಅರ್ಥ ಪೂರ್ಣ ಎಂದು ಕರೀನ ಅಭಿಪ್ರಾಯ ಪಟ್ಟಿದ್ದಾರೆ.
ಬಾಣಂತನ ಕುರಿತಾಗಿ ತಾವು ಬರೆದ 'ಪ್ರೆಗ್ನೆನ್ಸಿ ಬೈಬಲ್' ಪುಸ್ತಕದ ಪ್ರಚಾರ ಸಂದರ್ಭ ಅವರು ಮಾತನಾಡುತ್ತಿದ್ದರು.
Related Article
ಸೈಫ್ ಅಲಿ ಖಾನ್- ಕರೀನಾ ಕಪೂರ್ ದಂಪತಿಯ ಎರಡನೇ ಮಗನ ಹೆಸರು 'ಜೆಹ್' ಅಲ್ಲ ಜೆಹಂಗೀರ್!
ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ದೂರು ದಾಖಲು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


