'ಬಂದಿಷ್ ಬ್ಯಾಂಡಿಟ್ಸ್' ನಟ ಅಮಿತ್ ಮಿಸ್ತ್ರಿ ಹೃದಯಾಘಾತದಿಂದ ನಿಧನ
ಅಮೆಜಾನ್ ಪ್ರೈಮ್ ವಿಡಿಯೋ ಸಿರೀಸ್ 'ಬಂದಿಷ್ ಬ್ಯಾಂಡಿಟ್ಸ್' ಖ್ಯಾತಿಯ ಬಾಲಿವುಡ್ ನಟ ಅಮಿತ್ ಮಿಸ್ಟ್ರಿ ಅವರು ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ.

ಮುಂಬೈ: ಅಮೆಜಾನ್ ಪ್ರೈಮ್ ವಿಡಿಯೋ ಸಿರೀಸ್ 'ಬಂದಿಷ್ ಬ್ಯಾಂಡಿಟ್ಸ್' ಖ್ಯಾತಿಯ ಬಾಲಿವುಡ್ ನಟ ಅಮಿತ್ ಮಿಸ್ಟ್ರಿ ಅವರು ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ.
"ಶೋರ್ ಇನ್ ದಿ ಸಿಟಿ", ಬೇ ಯಾರ್, 'ಎ ಜೆಂಟಲ್‌ಮ್ಯಾನ್', 'ಕ್ಯಾ ಕೆಹನಾ' ಸೇರಿದಂತೆ ಹಲವು ಗುಜರಾತಿ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಅಮಿತ್ ಮಿಸ್ತ್ರಿ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.
ತಮ್ಮ ತಾಯಿಯೊಂದಿಗೆ ಅಂಧೇರಿಯಲ್ಲಿ ವಾಸವಾಗಿದ್ದ 47 ವರ್ಷದ ನಟ ಅಮಿತ್ ಅವರು ಇಂದು ಬೆಳಗ್ಗೆ 9.30ರ ಸುಮಾರಿಗೆ ಮನೆಯಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ.
‘ಅಮಿತ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಬೆಳಗ್ಗೆ ಉಪಾಹಾರದ ಬಳಿಕ ಸಣ್ಣಗೆ ಎದೆನೋವು ಎಂದು ಹೇಳಿದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲೂ ವಿಧಿ ಅವಕಾಶ ಕೊಡಲಿಲ್ಲ. ಅಷ್ಟರೊಳಗೇ ಅವರು ನಿಧನರಾದರು. ಮನೋರಂಜನಾ ಕ್ಷೇತ್ರಕ್ಕೆ ಅವರ ಸಾವು ತುಂಬಾ ನಷ್ಟ ಉಂಟುಮಾಡಿದೆ’ ಎಂದು ಮಿಸ್ತ್ರಿ ಅವರ ಮ್ಯಾನೇಜರ್ ಮಹರ್ಷಿ ದೇಸಾಯಿ ಹೇಳಿದ್ದಾರೆ.
ಅಹಾನಾ ಕುಮ್ರಾ, ಸುಮೀತ್ ವ್ಯಾಸ್, ತಿಶಾರ್ ಕಪೂರ್ ಮುಂತಾದ ನಟರು ಅಮಿತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


