ಲಸಿಕೆ ಪಡೆದ 10 ದಿನದ ನಂತರ ನಟ ಸೋನು ಸೂದ್ ಗೆ ಕೊರೋನಾ ದೃಢ!
ಕೊರೋನಾ ಸಂಕಟದ ನಡುವೆ ಅನೇಕ ವಲಸಿಗ ಕಾರ್ಮಿಕರೂ ಸೇರಿ ಸಾರ್ವಜನಿಕರಿಗೆ ನೆರವಾಗಿದ್ದ ನಟ ಸೋನು ಸೂದ್ ಗೆ ಕೊರೋನಾ ಸೋಂಕು ದೃಢವಾಗಿದೆ.

ಮುಂಬೈ: ಕೊರೋನಾ ಸಂಕಟದ ನಡುವೆ ಅನೇಕ ವಲಸಿಗ ಕಾರ್ಮಿಕರೂ ಸೇರಿ ಸಾರ್ವಜನಿಕರಿಗೆ ನೆರವಾಗಿದ್ದ ನಟ ಸೋನು ಸೂದ್ ಗೆ ಕೊರೋನಾ ಸೋಂಕು ದೃಢವಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ನಟ ಸೋನು ಸೂದ್ "ವರದಿಯಲ್ಲಿ ಪಾಸಿಟಿವ್ ಕಂಡುಬಂದ ತಕ್ಷಣ ಕ್ವಾರಂಟೈನ್ ಆಗಿದ್ದೇನೆ. ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನನಗೀಗ ಹೆಚ್ಚಿನ ಸಮಯ ಸಿಗಲಿದೆ. ಏನೇ ಸಮಸ್ಯೆ ಇದ್ದಲ್ಲಿ ನಾನು ನಿಮ್ಮೊಂದಿಗಿದ್ದೇನೆ ಎಂದು ಮರೆಯಬೇಡಿ" ಎಂದಿದ್ದಾರೆ.
ಇನ್ನು ಸೋನು ಸೂದ್ ಲಸಿಕೆ ಪಡೆದ ಸುಮಾರು ಹತ್ತು ದಿನಗಳ ನಂತರ ಕೊರೋನಾಗೆ ಪಾಸಿಟಿವ್ ವರದಿ ಪಡೆದಿದ್ದಾರೆ.
ಇತ್ತೀಚೆಗೆ ಅವರು ಪಂಜಾಬಿನ ಕೊರೋನಾ ವಿರೋಧಿ ವ್ಯಾಕ್ಸಿನೇಷನ್ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕವಾಗಿದ್ದರು.
ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಂದರ್ಭದಲ್ಲಿ ವಲಸಿಗರು ತಮ್ಮ ರಾಜ್ಯಗಳನ್ನು ತಲುಪಲು ಸಹಾಯ ಮಾಡಿದ್ದಕ್ಕಾಗಿ ರಾಷ್ಟ್ರದ ಗಮನ ಸೆಳೆದಿದ್ದ ನಟ ತಾವು ಈಗಲೂ ನಿಮ್ಮೊಡನಿದ್ದೇನೆ ಎಂದಿದ್ದಾರೆ. ಸೋನು ಸೂದ್ ಏಪ್ರಿಲ್ 7 ರಂದು ಲಸಿಕೆಯ ಮೊದಲ ಡೋಸ್ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


