ಸಂಜಯ್ ರೌತ್ ರನ್ನು ಟೀಕಿಸುವುದು ಮಹಾರಾಷ್ಟ್ರಕ್ಕೆ ಅವಮಾನವಲ್ಲ: ಕಂಗನಾ
ಶಿವಸೇನೆ ಸಂಸದ ಸಂಜಯ್ ರೌತ್ ಮತ್ತು ಬಾಲಿವುಡ್ ನಟಿ ಕಂಗನಾ ರನೌತ್ ನಡುವಿನ ವಾಕ್ಸಮರ ಮುಂದುವರೆದಿದ್ದು, ಸೇನಾ ನಾಯಕ ಇಡೀ ಮಹಾರಾಷ್ಟ್ರವನ್ನು ಪ್ರತಿನಿಧಿಸುವುದಿಲ್ಲ ಎಂದು ಕ್ವೀನ್ ತಿರುಗೇಟು ನೀಡಿದ್ದಾರೆ.

ಮುಂಬೈ: ಶಿವಸೇನೆ ಸಂಸದ ಸಂಜಯ್ ರೌತ್ ಮತ್ತು ಬಾಲಿವುಡ್ ನಟಿ ಕಂಗನಾ ರನೌತ್ ನಡುವಿನ ವಾಕ್ಸಮರ ಮುಂದುವರೆದಿದ್ದು, ಸೇನಾ ನಾಯಕ ಇಡೀ ಮಹಾರಾಷ್ಟ್ರವನ್ನು ಪ್ರತಿನಿಧಿಸುವುದಿಲ್ಲ ಎಂದು ಕ್ವೀನ್ ತಿರುಗೇಟು ನೀಡಿದ್ದಾರೆ.
ಮಹಿಳೆಯರನ್ನು ಶೋಷಿಸುವವರಿಗೆ ಅಧಿಕಾರ ನೀಡಲಾಗಿದೆ ಎಂದು ಆರೋಪಿಸಿರುವ ಬಾಲಿವುಡ್ ನಟಿ, ಭಾರತದ ಹೆಣ್ಣುಮಕ್ಕಳು ತಮ್ಮನ್ನು ನಿಂದಿಸುವವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
"ಸಂಜಯ್ ರೌತ್ ಜಿ, ನೀವು ನನ್ನನ್ನು ಕೆಟ್ಟ ಪದಗಳಿಂದ ನಿಂದಿಸಿದ್ದೀರಿ. ಇದು ನಿಮ್ಮ ಮನಸ್ಥಿತಿಯನ್ನು ತೋರಿಸುತ್ತದೆ ... ನಾನು ಮುಂಬೈ ಪೊಲೀಸರನ್ನು ಟೀಕಿಸಿದರೆ ಅಥವಾ ನಿಮ್ಮನ್ನು ಟೀಕಿಸಿದರೆ, ನಾನು ಮಹಾರಾಷ್ಟ್ರವನ್ನು ಅವಮಾನಿಸುತ್ತಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ನೀವು ಮಹಾರಾಷ್ಟ್ರವಲ್ಲ. ನಿಮ್ಮ ಜನರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಆದರೂ ನಾನು ಸೆಪ್ಟೆಂಬರ್ 9 ರಂದು ಮುಂಬೈಗೆ ಬರುತ್ತೇನೆ "ಎಂದು ರನೌತ್ ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ಹಾಕಿರುವ ವೀಡಿಯೊದಲ್ಲಿ ಹೇಳಿದ್ದಾರೆ.
"ನಿಮ್ಮ ಜನರು ನನ್ನ ದವಡೆ ಮುರಿಯುತ್ತೇನೆ ಕೊಲ್ಲುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ನನ್ನನ್ನು ಕೊಲ್ಲಲಿ, ನಾನು ಹೆದರುವುದಿಲ್ಲ. ಈ ದೇಶದ ಮಣ್ಣು ಅದರ ಘನತೆಗಾಗಿ ತ್ಯಾಗ ಮಾಡಿದವರ ರಕ್ತದಿಂದ ಸಮೃದ್ಧವಾಗಿದೆ ಮತ್ತು ನಾವೂ ಸಹ ಅದೇ ರೀತಿ ಮಾಡುತ್ತೇವೆ" ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


