ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾಗೆ ಎನ್.ಸಿ.ಬಿ. ಬುಲಾವ್
ಬಾಲಿವಿಡ್ ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ (ಮ್ಯಾನೇಜರ್) ಕರಿಷ್ಮಾ ಪ್ರಕಾಶ್ ಅವರನ್ನು ಮಾದಕವಸ್ತು ನಿಯಂತ್ರಣ ವಿಭಾಗ(ಎನ್.ಸಿ.ಬಿ.) ವಿಚಾರಣೆಗೆ ಕರೆದಿದೆ. ಕರಿಷ್ಮಾ ನಾಪತ್ತೆಯಾಗಿರುವ ಕಾರಣ ಅವರ ಮುಂಬೈನ ಮನೆ ಬಾಗಿಲಿಗೆ ನೋಟೀಸ್ ಹಚ್ಚಲಾಗಿದೆ.

ಮುಂಬೈ: ಬಾಲಿವಿಡ್ ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ (ಮ್ಯಾನೇಜರ್) ಕರಿಷ್ಮಾ ಪ್ರಕಾಶ್ ಅವರನ್ನು ಮಾದಕವಸ್ತು ನಿಯಂತ್ರಣ ವಿಭಾಗ(ಎನ್.ಸಿ.ಬಿ.) ವಿಚಾರಣೆಗೆ ಕರೆದಿದೆ. ಕರಿಷ್ಮಾ ನಾಪತ್ತೆಯಾಗಿರುವ ಕಾರಣ ಅವರ ಮುಂಬೈನ ಮನೆ ಬಾಗಿಲಿಗೆ ನೋಟೀಸ್ ಹಚ್ಚಲಾಗಿದೆ.
ಮಂಗಳವಾರ ದೀಪಿಕಾ ಅವರ ಮ್ಯಾನೇಜರ್ ಕರಿಷ್ಮಾ ಅವರ ಮುಂಬೈ ಮನೆಯಲ್ಲಿ ಡ್ರಗ್ಸ್ ವಶಪಡಿಸಿಕೊಂಡ ಬೆನ್ನಲ್ಲೇ ಎನ್,ಸಿ,ಬಿ, ಸಮನ್ಸ್ ಕೊಟ್ಟಿದೆ.
ಕಳೆದ ತಿಂಗಳೂ ಸಹ ಕರಿಷ್ಮಾ ಪ್ರಕಾಶ್ ಅವರನ್ನು ಬಾಲಿವುಡ್‌ನಲ್ಲಿ ನಿಷೇಧಿತ ವಸ್ತುಗಳ ಮಾರಾಟ ಮತ್ತು ಬಳಕೆಯ ಬಗ್ಗೆ ತನಿಖೆ ನಡೆಸುತ್ತಿರುವ ಎನ್.ಸಿ.ಬಿ. ಪ್ರಶ್ನಿಸಿತ್ತು,
ನಟಿಯರಾದ ರಾಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನು ಕಳೆದ ತಿಂಗಳು ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ತನಿಖೆಯಲ್ಲಿ ಏಜನ್ಸಿ ವಿಚಾರಣೆ ನಡೆಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


