ಬಾಲಿವುಡ್

ಮನೆಯಿಂದ ಹೊರಗಿದ್ದಾಗಲೂ ಪ್ರಿಯಾಂಕಾ ಚೋಪ್ರಾಗೆ 'ಇವರದ್ದೇ' ಚಿಂತೆಯಂತೆ!

ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ಜೊನಾಸ್ ತನ್ನ ಮುಂಬರುವ ಸಿನಿಮಾಗಳ ಚಿತ್ರಗಳಿಗಾಗಿ ಲಂಡನ್‌ಗೆ ತೆರಳುತ್ತಿದ್ದಂತೆ, ಇಬ್ಬರ ಬಗ್ಗೆ ಬಹಳ ಚಿಂತಿತರಾಗಿದ್ದಾರಂತೆ.

ಮನೆಯಿಂದ ಹೊರಗಿದ್ದಾಗಲೂ ಪ್ರಿಯಾಂಕಾ ಚೋಪ್ರಾಗೆ 'ಇವರದ್ದೇ' ಚಿಂತೆಯಂತೆ!
ಪ್ರಿಯಾಂಕಾ-ನಿಕ್
Published On :

ಮುಂಬೈ: ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ಜೊನಾಸ್ ತನ್ನ ಮುಂಬರುವ ಸಿನಿಮಾಗಳ ಚಿತ್ರಗಳಿಗಾಗಿ ಲಂಡನ್‌ಗೆ ತೆರಳುತ್ತಿದ್ದಂತೆ, ಈ ಇಬ್ಬರ ಬಗ್ಗೆ ಬಹಳ ಚಿಂತಿತರಾಗಿದ್ದಾರಂತೆ.

ಹೀಗೆಂದು ಸ್ವತಃ ಪಿಗ್ಗಿಯೇ ಇನ್ ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ.  ಅಂದ ಹಾಗೆ ಆ ಇಬ್ಬರು ಯಾರು ಗೊತ್ತಾ? ಆಕೆಯ ಎರಡು ಮುದ್ದಿನ ನಾಯಿಗಳು! ಶೂಟಿಂಗ್ ಹಿನ್ನೆಲೆಯಲ್ಲಿ ಮನೆಯಿಂದ ದೂರವಿರುವುದರಿಂದ ನಾಯಿ ಮರಿಗಳ ಹಾರೈಕೆ ಕುರಿತು ಆತಂಕದಲ್ಲಿದ್ದಾರೆ. 

Story image

ನಿಖ್ ಜೋನಾಸ್ ನನ್ನು ಮದುವೆಯಾಗಿ ಅಮೆರಿಕಾದಲ್ಲೇ ಪ್ರಿಯಾಂಕಾ ನೆಲೆಸಿದ್ದಾರೆ. ಈ ದಂಪತಿ ಕಳೆದ ವರ್ಷ ಎರಡು ಮುದ್ದಾದ ನಾಯಿ ಮರಿಗಳ ತಂದಿದ್ದಾರೆ. ನಾಯಿ ಮರಿಗಳ ಜೊತೆಗಿನ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.

Story image

ಇದೇ ವೇಳೆ ನಮ್ಮ ಕುಟುಂಬಕ್ಕೆ ನಿನಗೆ ಸ್ವಾಗತ. ಪಂಡಾ ಆಸ್ಟ್ರೇಲಿಯಾದ ನಾಯಿಯಾಗಿದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದರು.

Story image

2018ರ ಡಿಸೆಂಬರ್ 1ರಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಖ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ತಮ್ಮ ಜಾಲಿ ಡೇ ದಿನಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೇಡ್ ಮಾಡುವ ಮೂಲಕ ಹೆಚ್ಚು ಸಕ್ರೀಯರಾಗಿದ್ದಾರೆ.

Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.