ಒಟಿಟಿ ವೇದಿಕೆಯಲ್ಲಿ ವಿದ್ಯಾ ಬಾಲನ್ ಅವರ 'ಶಕುಂತಲಾ ದೇವಿ' ಚಿತ್ರ ಬಿಡುಗಡೆ
ಬಾಲಿವುಡ್‌ನಲ್ಲಿ ಗಂಭೀರ ನಟನೆಗಾಗಿ ಹೆಸರುವಾಸಿ ವಿದ್ಯಾ ಬಾಲನ್ ಅವರ ಚಿತ್ರ 'ಶಕುಂತಲಾ ದೇವಿ' ಒಟಿಟಿ (ಓವರ್ ದಿ ಟಾಪ್) ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

ಮುಂಬೈ: ಬಾಲಿವುಡ್‌ನಲ್ಲಿ ಗಂಭೀರ ನಟನೆಗಾಗಿ ಹೆಸರುವಾಸಿ ವಿದ್ಯಾ ಬಾಲನ್ ಅವರ ಚಿತ್ರ 'ಶಕುಂತಲಾ ದೇವಿ' ಒಟಿಟಿ (ಓವರ್ ದಿ ಟಾಪ್) ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
ಕೊರೊನಾ ವೈರಸ್‌ನಿಂದಾಗಿ ದೇಶವು ಲಾಕ್‌ಡೌನ್ ಆಗಿದೆ. ಈ ಅವಧಿಯಲ್ಲಿ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ. ವಿದ್ಯಾ ಬಾಲನ್ ಅವರ ಚಿತ್ರ 'ಶಕುಂತಲಾ ದೇವಿ' ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ.ವಿದ್ಯಾ ಅವರ ಚಿತ್ರ ಮೇ 8 ರಂದು ಬಿಡುಗಡೆಯಾಗಬೇಕಿತ್ತು ಆದರೆ ಕೊರೊನಾ ವೈರಸ್‌ನದಿಂದಾಗಿ ಚಿತ್ರದ ಬಿಡುಗಡೆಯು ಸ್ಥಗಿತಗೊಂಡಿದೆ.
ಇನ್ ಸ್ಟಾಗ್ರಾಮ್ ನಲ್ಲಿ ಈ ಮಾಹಿತಿಯನ್ನು ವಿದ್ಯಾ ನೀಡಿದ್ದಾರೆ, "ಶಕುಂತಲಾ ದೇವಿ ಶೀಘ್ರದಲ್ಲೇ ತನ್ನ ಕುಟುಂಬದೊಂದಿಗೆ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು ಎಂದು ಘೋಷಿಸಲು ಸಂತೋಷವಾಗಿದೆ. ಇಂತಹ ಊಹಿಸಲಾಗದ ಸಮಯದಲ್ಲಿ ನಾವು ನಿಮ್ಮನ್ನು ರಂಜಿಸಲು ಸಮರ್ಥರಾಗಿದ್ದೇವೆ ಎಂದು ನಾನು ರೋಮಾಂಚನಗೊಂಡಿದ್ದೇನೆ. ಆದರೆ, ಚಿತ್ರದ ಬಿಡುಗಡೆಯ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ" ಎಂದು ತಿಳಿಸಿದ್ದಾರೆ.
ಶಂಕುತಲಾ ದೇವಿ ಖ್ಯಾತ ಗಣಿತಕಾರರು. ಶಕುಂತಲಾ ದೇವಿ ಅವರ ಜೀವನಚರಿತ್ರೆಯಾಗಿದ್ದು, ಅವರ ಅದ್ಭುತ ಪ್ರತಿಭೆಯಿಂದ ಜಗತ್ತು ಬೆರಗುಗೊಂಡಿದೆ. ಗಣಿತದ ಸಂಕೀರ್ಣ ಲೆಕ್ಕಾಚಾರಗಳನ್ನು ಅವರು ಕೆಲವು ಸೆಕೆಂಡುಗಳಲ್ಲಿ ಕರಗತ ಮಾಡಿಕೊಂಡಿದ್ದರು. ಚಿತ್ರವನ್ನು ಅನು ಮೆನನ್ ನಿರ್ದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


