ಬಾಲಿವುಡ್

''ನಮ್ಮ ಕಥೆಯ ಅಂತ್ಯ'' ರಿಷಿ ಕಪೂರ್ ಗೆ ಭಾವನಾತ್ಮಕ ವಿದಾಯ ನುಡಿ ಬರೆದ ಪತ್ನಿ ನೀತು ಸಿಂಗ್ ಕಪೂರ್

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನರಾದ ಎರಡು ದಿನ ಬಳಿಕ ಅವರ ಪತ್ನಿ ನಟಿ ನೀತು ಸಿಂಗ್ ಕಪೂರ್ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ವಿದಾಯ ಪೋಸ್ಟ್ ವೊಂದನ್ನು ಹಾಕಿದ್ದಾರೆ.

''ನಮ್ಮ ಕಥೆಯ ಅಂತ್ಯ'' ರಿಷಿ ಕಪೂರ್ ಗೆ ಭಾವನಾತ್ಮಕ ವಿದಾಯ ನುಡಿ ಬರೆದ ಪತ್ನಿ ನೀತು ಸಿಂಗ್ ಕಪೂರ್
ನೀತು ಸಿಂಗ್ ಕಪೂರ್ ಮತ್ತು ರಿಷಿ ಕಪೂರ್ (ಸಂಗ್ರಹ ಚಿತ್ರ)
Published On :

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನರಾದ ಎರಡು ದಿನ ಬಳಿಕ ಅವರ ಪತ್ನಿ ನಟಿ ನೀತು ಸಿಂಗ್ ಕಪೂರ್ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ವಿದಾಯ ಪೋಸ್ಟ್ ವೊಂದನ್ನು ಹಾಕಿದ್ದಾರೆ.

ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಮುಖದ ತುಂಬಾ ನಗು ಇರುವ ರಿಷಿ ಕಪೂರ್ ಫೋಟೋವನ್ನು ಹಾಕಿರುವ ನೀತು ಕಪೂರ್ ನಮ್ಮ ಕಥೆಯ ಅಂತ್ಯ ಎಂದು ಅಡಿಬರಹ ಕೊಟ್ಟಿದ್ದಾರೆ.

ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕ್ಯಾನ್ಸರ್ ರೋಗಕ್ಕೆ ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಪಡೆದು ಕಳೆದ ಸೆಪ್ಟೆಂಬರ್ ನಲ್ಲಿ ಮುಂಬೈಗೆ ವಾಪಸ್ಸಾಗಿದ್ದ 67 ವರ್ಷದ ರಿಷಿ ಕಪೂರ್ ಕಳೆದ ಗುರುವಾರ ಮುಂಬೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು.

ರಿಷಿ ಕಪೂರ್ ಮತ್ತು ನೀತು ಸಿಂಗ್ 1974ರಲ್ಲಿ ಜೆಹ್ರೀಲಾ ಇನ್ಸಾನ್ ಚಿತ್ರೀಕರಣ ವೇಳೆ ಭೇಟಿಯಾಗಿದ್ದರು. ನಂತರ ಪರಿಚಯ, ಪ್ರೀತಿಗೆ ತಿರುಗಿ 1980ರಲ್ಲಿ ವಿವಾಹವಾದರು. ಖೇಲ್ ಖೇಲ್ ಮೇ, ರಫೂ ಚಕ್ಕರ್, ಕಭಿ ಕಭಿ, ಅಮರ್ ಅಕ್ಬರ್ ಅಂತೊನಿ, ದುನಿಯಾ ಮೇರಿ ಜಬ್ ಮೇ, ಜಿಂದಾ ದಿಲ್ ಮೊದಲಾದ ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.

ವಿವಾಹವಾದ ನಂತರವೂ ಈ ಜೋಡಿ ಲವ್ ಆಜ್ ಕಲ್, ದೊ ದೂನಿ ಚಾರ್, ಜಬ್ ತಕ್ ಹೈ ಜಾನ್ ಮತ್ತು ಬೆಶರಮ್ ಚಿತ್ರದಲ್ಲಿ ಪುತ್ರ ರಣ್ ಬೀರ್ ಕಪೂರ್ ಜೊತೆಗೆ ನಟಿಸಿದ್ದರು.

ರಿಷಿ ಕಪೂರ್ ತಮ್ಮ ಕೊನೆಯ ದಿನದವರೆಗೂ ಕುಟುಂಬಸ್ಥರು, ಬಂಧುಗಳ ಜೊತೆ, ಆಸ್ಪತ್ರೆಯಲ್ಲಿದ್ದಾಗ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಜೊತೆ ಹಾಸ್ಯ ಮಾಡುತ್ತಾ ವಿನೋದದಿಂದ ಇದ್ದರು ಎಂದು ಕಪೂರ್ ಮನೆತನ ಅವರ ನಿಧನ ನಂತರ ಬಿಡುಗಡೆ ಮಾಡಿದ ಪೋಸ್ಟ್ ನಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.