25 ಸಾವಿರ ಬಾಲಿವುಡ್ ದಿನಗೂಲಿ ಕಾರ್ಮಿಕರ ನೆರವಿಗೆ ಸಲ್ಮಾನ್ ಖಾನ್!
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟದಲ್ಲಿರುವ ಬಾಲಿವುಡ್ ನ 25 ಸಾವಿರ ದಿನಗೂಲಿ ಕಾರ್ಮಿಕರಿಗೆ ಆರ್ಥಿಕ ನೆರವನ್ನು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರಕಟಿಸಿದ್ದಾರೆ ಎಂದು ವೆಸ್ಟರ್ನ್ ಇಂಡಿಯನ್ ಸಿನಿ ನೌಕರರ ಒಕ್ಕೂಟ ತಿಳಿಸಿದೆ.

ಮುಂಬೈ: ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟದಲ್ಲಿರುವ ಬಾಲಿವುಡ್ ನ 25 ಸಾವಿರ ದಿನಗೂಲಿ ಕಾರ್ಮಿಕರಿಗೆ ಆರ್ಥಿಕ ನೆರವನ್ನು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರಕಟಿಸಿದ್ದಾರೆ ಎಂದು ವೆಸ್ಟರ್ನ್ ಇಂಡಿಯನ್ ಸಿನಿ ನೌಕರರ ಒಕ್ಕೂಟ ತಿಳಿಸಿದೆ.
ಕೊರೋನಾ ಸೋಂಕು ಹರಡಂತೆ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಘೋಷಿಸಿದ್ದಾರೆ. ಆದರೆ, ಇದರಿಂದ ಬಾಲಿವುಡ್ ನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ನೌಕರರ ಮೇಲೆ ಕೆಟ್ಟ ರೀತಿಯ ಪರಿಣಾಮ ಬೀರಿದೆ.
ಬೀಯಿಂಗ್ ಹ್ಯೂಮನ್ ಪೌಂಢೇಷನ್ ಮೂಲಕ ದಿನಗೂಲಿ ಕಾರ್ಮಿಕರಿಗೆ ಸಲ್ಮಾನ್ ಖಾನ್ ನೆರವು ನೀಡಲಿದ್ದಾರೆ ಎಂದು ಎಫ್ ಡಬ್ಯ್ಲೂಐಸಿಇ ಅಧ್ಯಕ್ಷ ಬಿಎನ್ ತಿವಾರಿ ಹೇಳಿದ್ದಾರೆ.
ದಿನಗೂಲಿ ನೌಕರರಿಗೆ ನೆರವು ನೀಡಲು ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಪೌಂಢೇಷನ್ ಮುಂದೆ ಬಂದಿದೆ. 5 ಲಕ್ಷ ಕಾರ್ಮಿಕರ ಪೈಕಿ 25 ಸಾವಿರ ಕಾರ್ಮಿಕರಿಗೆ ಆರ್ಥಿಕ ನೆರವು ಅಗತ್ಯವಾಗಿದೆ. ಈ ಕಾರ್ಮಿಕರನ್ನು ತಮ್ಮ ಸ್ವಂತ ವೆಚ್ಚದಲ್ಲಿ ನೋಡಿಕೊಳ್ಳುವುದಾಗಿ ಪೌಂಢೇಷನ್ ಹೇಳಿದೆ. ಕಾರ್ಮಿಕರಿಗೆ ನೇರವಾಗಿ ಹಣ ತಲುಪಿಸಲು 25 ಸಾವಿರ ಕಾರ್ಮಿಕರ ಬ್ಯಾಂಕ್ ವಿವರವನ್ನು ಕೇಳಿದ್ದಾರೆ ಎಂದು ತಿವಾರಿ ತಿಳಿಸಿದ್ದಾರೆ.
ಉಳಿದ 4,75,000 ಕಾರ್ಮಿಕರು ಸುಮಾರು ಒಂದು ತಿಂಗಳವರೆಗೂ ಹೇಗೊ ಬದುಕಬಹುದು, ಎಲ್ಲಾ ಕಾರ್ಮಿಕರಿಗೂ ದೊಡ್ಡ ಮಟ್ಟದ ಪಡಿತರ ಪಾಕೆಟ್ ಗಳನ್ನು ಸಂಗ್ರಹಿಸಿದ್ದೇವೆ. ಆದರೆ, ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರೂ ಕೂಡಾ ಬಂದು ಸ್ವೀಕರಿಸಿಲ್ಲ, ಅವರಿಗೆ ಹೇಗೆ ತಲುಪಿಸಬೇಕು ಎಂಬ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾರ್ಮಿಕರಿಗೆ ನೆರವು ನೀಡುವಂತೆ ಚಿತ್ರರಂಗದ ಹಲವು ಮಂದಿಗೆ ಸಂದೇಶ ಕಳುಹಿಸಲಾಗಿದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಿರ್ಮಾಪಕ ಮಹಾವೀರ್ ಜೈನ್ ಆಹಾರ ಮತ್ತು ಅಗತ್ಯ ವಸ್ತುಗಳ ವಿಷಯದಲ್ಲಿ ಸಹಾಯ ನೀಡಲು ಮುಂದಾಗಿದ್ದಾರೆ ಎಂದು ತಿವಾರಿ ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


