ಬಾಲಿವುಡ್

ಬಾಲ್ಯದಲ್ಲೇ ಸಾಮಾಜಿಕ ಅಂತರ ಅಭ್ಯಾಸ ಮಾಡಿದ್ದ ಕರೀನಾ ಕಪೂರ್ ಖಾನ್!

ಬೇರೆಲ್ಲಾ ನಟ ನಟಿಅರಂತೆ ಬಾಲಿವುಡ್ ತಾರೆ ಕರೀನಾ ಕಪೂರ್ ಸಹ ಕೊರೋನಾ ಹಾವಳಿ ಪ್ರಕರಣದ ಕಾರಣ ಸ್ವಯಂ ನಿರ್ಬಂಧವನ್ನು ವಿಧಿಸಿಕೊಂಡಿದ್ದಾರೆ. ಆಕೆ ತಮ್ಮ ಸಾಮಾಜಿಕ ತಾಣ ಇನ್ಸ್ಟಾಗ್ರಾಂನಲ್ಲಿ ಮುಂಬೈನ ತಮ್ಮ ಮನೆಯಲ್ಲಿ ಸೈಫ್ ಅಲಿ ಖಾನ್ ಪುಸ್ತಕ ಓದುತ್ತಿರುವ ಹಾಗೂ ತಾನು ಬಿಸಿಲಿನಲ್ಲಿ ಓಡಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರ ಆದರೆ ವಿಷಯ ಅದಲ್ಲ, ಇದೀಗ ಆಕೆ ತಮ್ಮ

ಬಾಲ್ಯದಲ್ಲೇ ಸಾಮಾಜಿಕ ಅಂತರ ಅಭ್ಯಾಸ ಮಾಡಿದ್ದ ಕರೀನಾ ಕಪೂರ್ ಖಾನ್!
ಕರೀನಾ ಕಪೂರ್ ಬಾಲ್ಯದ ಚಿತ್ರ
Published On :

ಬೇರೆಲ್ಲಾ ನಟ ನಟಿಅರಂತೆ ಬಾಲಿವುಡ್ ತಾರೆ ಕರೀನಾ ಕಪೂರ್ ಸಹ ಕೊರೋನಾ ಹಾವಳಿ ಪ್ರಕರಣದ ಕಾರಣ ಸ್ವಯಂ ನಿರ್ಬಂಧವನ್ನು ವಿಧಿಸಿಕೊಂಡಿದ್ದಾರೆ. ಆಕೆ ತಮ್ಮ ಸಾಮಾಜಿಕ ತಾಣ ಇನ್ಸ್ಟಾಗ್ರಾಂನಲ್ಲಿ  ಮುಂಬೈನ ತಮ್ಮ ಮನೆಯಲ್ಲಿ ಸೈಫ್ ಅಲಿ ಖಾನ್  ಪುಸ್ತಕ ಓದುತ್ತಿರುವ ಹಾಗೂ ತಾನು ಬಿಸಿಲಿನಲ್ಲಿ ಮುಖ ತೋರಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರ ಆದರೆ ವಿಷಯ ಅದಲ್ಲ, ಇದೀಗ ಆಕೆ ತಮ್ಮ ಬಾಲ್ಯದ ಫೋಟೋ ಒಂದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು ""ನಿಮಗೆ ಯಾರಾದರೂ ಕೈಕುಲುಕಲು ಬಂದರೆ ನನ್ನಂತೆ ಮಾಡಿ.....#StayHome #StaySafe."  ಎಂದು ಬರೆದಿದ್ದಾರೆ.

ಇನ್ನು ಪುಟ್ಟ ಮಗುವಾಗಿದ್ದ ಕರೀನಾ ತಮಗೆ ಶೇಕ್ ಹ್ಯಾಂಡ್ ಮಾಡ ಬಂದವರಿಗೆ ತನ್ನೆರಡೂ ಕೈಗಳನ್ನು ಹಿಂದಕ್ಕೆಳೆದುಕೊಂಡು "ಬೇಡ, ಬೇಡ" ಎಂಬ ರೀತಿಯಲ್ಲಿ ಪೋಸ್ ನೀಡಿದ್ದಾರೆ.ಅಲ್ಲದೆ ನಾನ್ಂದು ಮಾಡುತ್ತಿದ್ದಂತೆಯೇ ಈಗ ನಿಮಗೆ ಯಾರಾದರೂ ಶೇಕ್ ಹ್ಯಾಂಡ್ ಮಾಡಲು ಮುಂದಾದರೆ ಬೇಡವೆಂದು ಕೈಯನ್ನು ಹಿಂದಕ್ಕೆಳೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ನಾವೆಲ್ ಕೊರೋನಾವೈರಸ್ ಹಾವಳಿಯ ಕಾರಣ ಬಾಲಿವುಡ್ ತಾರೆ ಕರೀನಾ ಹಾಗೂ ಸೈಫ್ ಅಲಿ ಖಾನ್ ದಂಪತಿಗಳು ತಮ್ಮ ಪುತ್ರ ತೈಮೂರ್ ಜತೆಗೆ ಮನೆಯಲ್ಲಿ ತಮ್ಮ ಸಮಯಕಳೆಯುತ್ತಿದ್ದಾರೆ.

ಕರೀನಾ ಅವರ ಇತ್ತೀಚಿನ ಚಿತ್ರ ಆಂಗ್ರೆಜಿ ಮೀಡಿಯಂ ಮಾರ್ಚ್ 13 ರಂದು ಬಿಡುಗಡೆಯಾಯಿತು. ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದರೂ, ದೇಶದ ಅನೇಕ ಭಾಗಗಳಲ್ಲಿ ಚಿತ್ರಮಂದಿರಗಳನ್ನು ಸ್ಥಗಿತಗೊಳಿಸಿದ್ದರಿಂದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಷ್ಟ ಅನುಭವಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.