ಬಾಲಿವುಡ್

ಕೊರೋನಾಗೆ ಬಲಿಯಾದ ಬಾಲಿವುಡ್ ಸಂಗೀತ ನಿರ್ದೇಶಕ ವಾಜಿದ್ ಖಾನ್ ತಾಯಿಗೆ ಪಾಸಿಟಿವ್, ಆಸ್ಪತ್ರೆಗೆ ದಾಖಲು

ನಿನ್ನೆಯಷ್ಟೇ ಕೊರೋನಾ ವೈರಸ್ ನಿಂದ ಮೃತಪಟ್ಟ ಬಾಲಿವುಡ್ ನ ಸಂಗೀತ ನಿರ್ದೇಶಕ ಮತ್ತು ಗಾಯಕ ಸಾಜಿದ್-ವಾಜಿದ್ ಖ್ಯಾತಿಯ ವಾಜಿದ್ ಖಾನ್ ಅವರ ತಾಯಿಗೆ ಈಗ ಮಹಾಮಾರಿ ವಕ್ಕರಿಸಿದ್ದು, ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೋನಾಗೆ ಬಲಿಯಾದ ಬಾಲಿವುಡ್ ಸಂಗೀತ ನಿರ್ದೇಶಕ ವಾಜಿದ್ ಖಾನ್ ತಾಯಿಗೆ ಪಾಸಿಟಿವ್, ಆಸ್ಪತ್ರೆಗೆ ದಾಖಲು
ವಾಜಿದ್ ಖಾನ್ - ಸಾಜಿದ್ ಖಾನ್ ಹಾಗೂ ಅವರ ತಾಯಿ
Published On :

ಮುಂಬೈ: ನಿನ್ನೆಯಷ್ಟೇ ಕೊರೋನಾ ವೈರಸ್ ನಿಂದ ಮೃತಪಟ್ಟ ಬಾಲಿವುಡ್ ನ ಸಂಗೀತ ನಿರ್ದೇಶಕ ಮತ್ತು ಗಾಯಕ ವಾಜಿದ್ ಖಾನ್ ಅವರ ತಾಯಿಗೆ ಈಗ ಮಹಾಮಾರಿ ವಕ್ಕರಿಸಿದ್ದು, ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಜಿದ್ ಖಾನ್ ತಾಯಿ ರಜಿನಾ ಖಾನ್ ಹಾಗೂ ಅವರ ಮನೆಗೆಲಸದಾಕೆಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರನ್ನು ಸುರನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಸಂಬಂಧಿ ಶದಬ್ ಫರಿದಿ ಅವರು ಹೇಳಿದ್ದಾರೆ.

42 ವರ್ಷದ ವಾಜಿದ್ ಖಾನ್ ಅವರು ನಿನ್ನೆ ಬೆಳಗಿನ ಜಾವ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾದರು. ಅವರಿಗೆ ಕೊರೋನಾ ಸೋಂಕು ದೃಢವಾಗಿತ್ತು, ಜೊತೆಗೆ ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದರು.

ಇದೀಗ ವಾಜಿದ್ ಖಾನ್ ಅವರ ತಾಯಿ ಅವರಿಗೂ ಕೊರೋನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ. ತಮ್ಮ ಮಗ ವಾಜಿದ್ ಖಾನ್‌ ಗೆ ಆರೋಗ್ಯ ಸರಿಯಿಲ್ಲದಾಗ ಅವರನ್ನು ನೋಡಿಕೊಳ್ಳಲೆಂದು ತಾಯಿ ರಜಿನಾ ಖಾನ್ ಆಸ್ಪತ್ರೆಯಲ್ಲಿಯೇ ಉಳಿದಿದ್ದರು. ಹಾಗಾಗಿ ಅವರಿಗೂ ಸೋಂಕು ತಗುಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.