COVID-19 positive

ರಾಜ್ಯದಲ್ಲಿಂದು 158 ಮಂದಿಗೆ ಕೊರೋನಾ: 69 ಸೋಂಕಿತರು ಗುಣಮುಖ
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 158 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 69 ಸೋಂಕಿತರು ಗುಣಮುಖರಾಗಿದ್ದಾರೆ. ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 568 ಆಗಿದೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್-19 ಪಾಸಿಟಿವ್!
ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ಗೆ ಕೇವಲ ಆರು ದಿನಗಳು ಇರುವಂತೆಯೇ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಶನಿವಾರ ನಡೆಸಿದ ರಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ

ಹಾಸನ: ಕಾಫಿ ಎಸ್ಟೇಟ್ ನಲ್ಲಿ ಪಶ್ಚಿಮ ಬಂಗಾಳದಿಂದ ಬಂದಿದ್ದ 23 ವಲಸೆ ಕಾರ್ಮಿಕರಿಗೆ ಕೋವಿಡ್-19 ದೃಢ
ಸಕಲೇಶಪುರದ ಕಾಫಿ ಎಸ್ಟೇಟ್ ವೊಂದರಲ್ಲಿ ಪಶ್ಚಿಮ ಬಂಗಾಳದಿಂದ ಬಂದಿದ್ದ 23 ವಲಸೆ ಕಾರ್ಮಿಕರಲ್ಲಿ ಬುಧವಾರ ಕೋವಿಡ್-19 ಸೋಂಕು ದೃಢಪಟ್ಟಿದೆ.

ಮುಂಬೈ: ಬೈಕುಲಾ ಮಹಿಳಾ ಜೈಲಿನ 39 ಕೈದಿಗಳಿಗೆ ಕೋವಿಡ್-19 ಪಾಸಿಟಿವ್
ಬೈಕುಲಾ ಮಹಿಳಾ ಜೈಲಿನಲ್ಲಿರುವ 39 ಕೈದಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಯಿಂದ ಈ ಜೈಲಿನ ಕೈದಿಗಳು, ಸಿಬ್ಬಂದಿ ಸೇರಿದಂತೆ ಒಟ್ಟು 120 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 39 ಕೈದಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೋವಿಡ್-19: ಚೆನ್ನೈನ ವಂಡಲೂರು ಮೃಗಾಲಯದಲ್ಲಿ ಸಿಂಹಿಣಿ ಸಾವು, ಇತರ ಎಂಟು ಸಿಂಹಗಳಿಗೆ ಪಾಸಿಟಿವ್!
ವಂಡಲೂರಿನ ಅರಿಗ್ನಾರ್ ಅಣ್ಣಾ ಪ್ರಾಣಿ ಸಂಗ್ರಹಾಲಯದಲ್ಲಿ 9 ವರ್ಷದ ಸಿಂಹಿಣಿ ನೀಲಾ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದು, ಇತರ ಎಂಟು ಸಿಂಹಗಳಿಗೆ ಪಾಸಿಟಿವ್ ಸೋಂಕು ದೃಢಪಟ್ಟಿದೆ.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಮಕ್ಕಳಿಗೆ ಕೋವಿಡ್-19 ಪಾಸಿಟಿವ್!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಪುತ್ರ ವಿಯಾನ್ -ರಾಜ್ , ಪುತ್ರಿ ಸಮಿಶಾ ಸೇರಿದಂತೆ ಕುಟುಂಬದ ಆರು ಸದಸ್ಯರಿಗೆ ಕೋವಿಡ್-19 ಸೋಂಕು ತಗುಲಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಗೆ ಕೋವಿಡ್-19 ಪಾಸಿಟಿವ್
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಜನರಲ್ ಅನಿಲ್ ಬೈಜಲ್ ಗೆ ಶುಕ್ರವಾರ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಮಸ್ಕಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡಗೆ ಕೋವಿಡ್-19 ಪಾಸಿಟಿವ್
ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರತಾಪ್ ಗೌಡ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಪ್ರತಾಪಗೌಡ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಆಸ್ಪತ್ರೆಗಳ ಅವ್ಯವಸ್ಥೆ: ಮೈಸೂರಿನ ಕೋವಿಡ್-19 ಸೋಂಕಿತ ವಿಧವೆಯನ್ನು ಅಪರಿಚಿತ ಶವ ಎಂದು ದಹನ!
ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ 60 ವರ್ಷದ ಕೋವಿಡ್-19 ರೋಗಿಯನ್ನು ಮೈಸೂರಿನ ನಿಯೋಜಿತ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಕರೆತರಲಾಗಿತ್ತು. ಆದರೆ ರೋಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟು ಕುಟುಂಬದವರಿಲ್ಲದೆ ಅಪರಿಚಿತ ಮೃತದೇಹವೆಂದು ಸುಟ್ಟ ಘಟನೆ ನಡೆದಿದೆ.

