ಬಾಲಿವುಡ್

ಸಾಯುವ ಮುನ್ನ ಸುಶಾಂತ್ ಸಿಂಗ್ ಮಾಡಿದ್ದ ವಾಟ್ಸ್ ಸಂದೇಶ ಶೇರ್ ಮಾಡಿ ಸಹೋದರಿ, ವೈರಲ್!

ಬಾಲಿವುಡ್ ನ ಉದಯೋನ್ಮಕ ನಟ ಸುಶಾಂತ್ ಸಿಂಗ್ ರಜಪೂತ್ ಅವರು 34 ವರ್ಷಕ್ಕೆ ಆತ್ಮಹತ್ಯೆಗೆ ಶರಣಾಗಿದ್ದು ಬಾಲಿವುಡ್ ಅನ್ನು ದಂಗುಪಡಿಸಿತ್ತು.

ಸಾಯುವ ಮುನ್ನ ಸುಶಾಂತ್ ಸಿಂಗ್ ಮಾಡಿದ್ದ ವಾಟ್ಸ್ ಸಂದೇಶ ಶೇರ್ ಮಾಡಿ ಸಹೋದರಿ, ವೈರಲ್!
ಸುಶಾಂತ್ ಸಿಂಗ್-ಶ್ವೇತಾ ಸಿಂಗ್
Published On :

ನವದೆಹಲಿ: ಬಾಲಿವುಡ್ ನ ಉದಯೋನ್ಮಕ ನಟ ಸುಶಾಂತ್ ಸಿಂಗ್ ರಜಪೂತ್ ಅವರು 34 ವರ್ಷಕ್ಕೆ ಆತ್ಮಹತ್ಯೆಗೆ ಶರಣಾಗಿದ್ದು ಬಾಲಿವುಡ್ ಅನ್ನು ದಂಗುಪಡಿಸಿತ್ತು. 

ಜೂ.14ರಂದು ನಟ ಸುಶಾಂತ್ ಸಿಂಗ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಇದಾಗ ಬಳಿಕ ಸುಶಾಂತ್ ಸಾವಿನ ಕುರಿತಂತೆ ಇದು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗಳಾಗಿದ್ದವು. ಇಲ್ಲದೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಲಾಗಿತ್ತು. 

ಸದ್ಯ ಮುಂಬೈ ಪೊಲೀಸರು ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದು ಆತ್ಮಹತ್ಯೆಗೂ ಮುನ್ನ ಸುಶಾಂತ್ ಯಾರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದರು. ಯಾರ ಜೊತೆ ಚಾಟ್ ಮಾಡಿದ್ದರುಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಸುಶಾಂಗ್ ಸಿಂಗ್ ಸಾಯುವ ಮುನ್ನ ಮಾಡಿದ್ದ ವಾಟ್ಸಪ್ ಸಂದೇಶವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Story image

ಹೌದು ಸುಶಾಂತ್ ಸಿಂಗ್ ಸಹೋದರಿ ಶ್ವೇತ ಸಿಂಗ್ ಅವರು ತಮ್ಮೊಂದಿಗೆ ಚಾಟ್ ಮಾಡಿದ್ದ ವಾಟ್ಸಪ್ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿದ್ದಾರೆ. ಜೂನ್ 14ರಂದು ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದರು. ಇದಕ್ಕೂ ಮುನ್ನ ಜೂನ್ 9 ಮತ್ತು 10ರಂದು ಸಹೋದರಿಯೊಂದಿಗೆ ವಾಟ್ಸಪ್ ಚಾಟ್ ಮಾಡಿದ್ದರು. 

ಚಾಟ್ ನಲ್ಲಿ ನೀನು ಅಮೆರಿಕಾಕ್ಕೆ ಬಂದು ಬಿಡು ಎಂದು ಶ್ವೇತ ಅವರು ತಮ್ಮನನ್ನು ಕರೆದಿದ್ದಾರೆ. ಇದಕ್ಕೆ ಸುಶಾಂತ್ ಬರಬೇಕು ತುಂಬಾ ಅನಿಸುತ್ತಿದೆ ಅಕ್ಕಾ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಶ್ವೇತ ಸಿಂಗ್ ಒಂದು ತಿಂಗಳಾದರೂ ಬಾ, ನಿನ್ನ ಮನಸ್ಸಿಗೂ ಸಮಾಧಾನವಾಗುತ್ತದೆ. ನಾವೆಲ್ಲ ಸೇರಿ ಎಂಜಾಯ್ ಮಾಡಬಹುದು ಎಂದು ಬರೆದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.