ಹಾಲಿವುಡ್ ನ ಅವೆಂಜರ್ಸ್ ದಾಖಲೆ ಹಿಂದಿಕ್ಕಿದ ಸುಶಾಂತ್ ಸಿಂಗ್ ರಜಪೂತ್ ರ 'ದಿಲ್ ಬೇಚಾರ' ಟ್ರೈಲರ್
ಇತ್ತೀಚೆಗೆ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ 'ದಿಲ್ ಬೇಚಾರ' ಸಿನಿಮಾದ ಟ್ರೈಲರ್ ಇದೀಗ ಟ್ರೆಂಡಿಂಗ್ ಆಗಿದ್ದು, ಭಾರತದಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬೈ: ಇತ್ತೀಚೆಗೆ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ 'ದಿಲ್ ಬೇಚಾರ' ಸಿನಿಮಾದ ಟ್ರೈಲರ್ ಇದೀಗ ಟ್ರೆಂಡಿಂಗ್ ಆಗಿದ್ದು, ಭಾರತದಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೌದು.. ನಿನ್ನೆಯಷ್ಟೇ ಯೂಟ್ಯೂಬ್ ನಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ 'ದಿಲ್ ಬೇಚಾರ' ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿತ್ತು. ಅಂತೆಯೇ ಕೇವಲ 24 ಗಂಟೆಗಳಲ್ಲಿ ದಿಲ್ ಬೇಚಾರ ಚಿತ್ರದ ಟ್ರೈಲರ್ ಅನ್ನು ಬರೊಬ್ಬರಿ 1,695,300 ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಂತೆಯೇ 2,42 ,000 ಮಂದಿ ಟ್ರೈಲರ್ ಅನ್ನು ನೆಚ್ಚಿಕೊಂಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲೂ ದಿಲ್ ಬೇಚಾರಾ ಟ್ರೈಲರ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, 4.8 ಮಿಲಿಯನ್ ಮಂದಿ ಟ್ರೈಲರ್ ಗೆ ಲೈಕ್ ಒತ್ತಿದ್ದಾರೆ. ಆ ಮೂಲಕ ದಿಲ್ ಬೇಚಾರಾ ಟ್ರೈಲರ್ ಹಾಲಿವುಡ್ ನ ಅವೆಂಜರ್ಸ್-ಇನ್ಫಿನಿಟಿ ವಾರ್ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ. ಅವೆಂಜರ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 3.8 ಮಿಲಿಯನ್ ಲೈಕ್ಸ್ ಬಂದಿತ್ತು. ಈ ದಾಖಲೆಯನ್ನು ದಿಲ್ ಬೇಚಾರ ಚಿತ್ರ 4.8 ಮಿಲಿಯನ್ ಲೈಕ್ಸ್ ಪಡೆಯುವುದರೊಂದಿಗೆ ಹಿಂದಿಕ್ಕಿದೆ.
ಲೇಖಕ ಜಾನ್ ಗ್ರೀನ್ ಅವರು ಬರೆದಿರುವ 'ದಿ ಫಾಲ್ಟಿ ಇನ್ ಅವರ ಸ್ಚಾರ್ಸ್' ಕಾದಂಬರಿ ಆಧಾರಿತ ಕಥಾ ಹಂದರವನ್ನು ದಿಲ್ ಬೇಚಾರಾ ಹೊಂದಿದೆ. ಕಿಜಿ ಎಂಬ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿ ಮತ್ತು ಮ್ಯಾನ್ನಿ ಎಂಬ ವಿದ್ಯಾರ್ಥಿಯ ನಡುವಿನ ಪ್ರೇಮಕಥೆಯನ್ನು ಚಿತ್ರದಲ್ಲಿ ಸುಂದರವಾಗಿ ತೋರಿಸಲಾಗಿದೆ. ಮೇ 8ರಂದು ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತಾದರೂ ಕೊರೋನಾ ವೈರಸ್ ನಿಂದಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ನಿರ್ದೇಶಕ ಮುಖೇಶ್ ಛಾಬ್ರಾ ಅವರು ಚಿತ್ರವನ್ನು ನಿರ್ದೇಶಿಸಿದ್ದು, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಈ ಚಿತ್ರಕ್ಕಾಗಿ ಚಿತ್ರದ ಕಥೆಯನ್ನೇ ಕೇಳದೇ ಮುಖೇಶ್ ಛಾಬ್ರಾಗೆ ಅವಕಾಶ ಕೊಟ್ಟಿದ್ದರಂತೆ.
ಕಳೆದ ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಖಿನ್ನತೆಗೊಳಗಾಗಿ ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


