ಬಾಲಿವುಡ್

ನಿರ್ಭಯಾ ಅಪರಾಧಿಗಳ ಜೊತೆ ಇಂದಿರಾ ಜೈಸಿಂಗ್ ರನ್ನು ಜೈಲಿನಲ್ಲಿರಿಸಬೇಕು: ಕಂಗನಾ ರಣಾವತ್ 

ನಿರ್ಭಯಾ ಅತ್ಯಾಚಾರಿಗಳನ್ನು ಕ್ಷಮಿಸಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ನೀಡಿರುವ ಹೇಳಿಕೆಗೆ ಬಾಲಿವುಡ್ ನಟಿ ಕಂಗನಾ ರಣಾವತ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನಿರ್ಭಯಾ ಅಪರಾಧಿಗಳ ಜೊತೆ ಇಂದಿರಾ ಜೈಸಿಂಗ್ ರನ್ನು ಜೈಲಿನಲ್ಲಿರಿಸಬೇಕು: ಕಂಗನಾ ರಣಾವತ್ 
ಕಂಗನಾ ರಣಾವತ್ -ಇಂದಿರಾ ಜೈಸಿಂಗ್
Published On :

ನವದೆಹಲಿ: ನಿರ್ಭಯಾ ಅತ್ಯಾಚಾರಿಗಳನ್ನು ಕ್ಷಮಿಸಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ನೀಡಿರುವ ಹೇಳಿಕೆಗೆ ಬಾಲಿವುಡ್ ನಟಿ ಕಂಗನಾ ರಣಾವತ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 


ತಮ್ಮ ಪಂಗಾ ಚಿತ್ರದ ಪ್ರಚಾರ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿರ್ಭಯಾ ಅಪರಾಧಿಗಳ ಜೊತೆಗೆ ಆ ಹೆಂಗಸು ಇಂದಿರಾ ಜೈಸಿಂಗ್ ರನ್ನು ನಾಲ್ಕು ದಿವಸ ಜೈಲಿನಲ್ಲಿರಿಸಬೇಕು. ಅಂತಹ ಮಹಿಳೆಯರೇ ಇಂತಹ ರಾಕ್ಷಸಪ್ರವೃತ್ತಿಯ ಕೊಲೆಗಾರ ಮಕ್ಕಳಿಗೆ ಜನ್ಮ ನೀಡುವುದು ಎಂದು ಆಕ್ರೋಶ ಹೊರಹಾಕಿದರು.


ಇಂದಿರಾ ಜೈಸಿಂಗ್ ಯಾವತ್ತೂ ಕೂಡ ನಿರ್ಭಯಾ ಪೋಷಕರನ್ನು ಭೇಟಿ ಮಾಡಿ ಅವರ ಕಷ್ಟ ಸುಖ ವಿಚಾರಿಸಲಿಲ್ಲ. ಇಂದು ಅಪರಾಧಿಗಳ ಪರ ವಹಿಸಿ ಮಾತನಾಡುತ್ತಿದ್ದಾರೆ. ಅತ್ಯಾಚಾರಿಗಳನ್ನು ಬೆಂಬಲಿಸಿ ತಮ್ಮ ಕೆಲಸ ಮಾಡಿಸಿಕೊಳ್ಳುವ ಇಂತವರಿಂದಲೇ ಅಪರಾಧಿಗಳಿಗೆ ಶಿಕ್ಷೆಯಾಗಿ ಅಮಾಯಕರಿಗೆ ನ್ಯಾಯ ಸಿಗಲು ಈ ದೇಶದಲ್ಲಿ ವಿಳಂಬವಾಗುತ್ತಿದೆ ಎಂದು ಕಂಗನಾ ರಣಾವತ್ ನೊಂದು ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.