ಆಲಿಯಾ ಭಟ್ ತನ್ನ ಗರ್ಲ್ ಫ್ರೆಂಡ್ ಎಂದು ಕೊನೆಗೂ ಒಪ್ಪಿಕೊಂಡ ರಣಬೀರ್ ಕಪೂರ್, ಮುಂದಿನ ವರ್ಷ ಮದುವೆ ಯೋಚನೆ
ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತುಂಬಾ ಫೇಮಸ್ ಲವ್ ಬರ್ಡ್ಸ್ ಗಳು. ಕಳೆದ ಮೂರ್ನಾಲ್ಕು ವರ್ಷಗಳಿಂದ ಇವರ ಪ್ರೀತಿ, ಪ್ರೇಮದ ಬಗ್ಗೆ ಚಿತ್ರಪ್ರೇಮಿಗಳು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ಇವರಿಬ್ಬರೂ ತಾವು ಪ್ರೇಮಿಗಳು ಎಂದು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ.

ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತುಂಬಾ ಫೇಮಸ್ ಲವ್ ಬರ್ಡ್ಸ್ ಗಳು. ಕಳೆದ ಮೂರ್ನಾಲ್ಕು ವರ್ಷಗಳಿಂದ ಇವರ ಪ್ರೀತಿ, ಪ್ರೇಮದ ಬಗ್ಗೆ ಚಿತ್ರಪ್ರೇಮಿಗಳು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ಇವರಿಬ್ಬರೂ ತಾವು ಪ್ರೇಮಿಗಳು ಎಂದು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ.
ಇದೀಗ ಸ್ವತಃ ರಣಬೀರ್ ಕಪೂರ್ ತಮ್ಮ ಗರ್ಲ್ ಫ್ರೆಂಡ್ ಆಲಿಯಾ ಭಟ್ ಎಂದು ಖಚಿತಪಡಿಸಿದ್ದು ಈ ಕೊರೋನಾ ಸೋಂಕಿನ ಸಮಸ್ಯೆ ಈ ವರ್ಷ ಇರದಿದ್ದರೆ ಇಷ್ಟು ಹೊತ್ತಿಗೆ ಹಸೆಮಣೆಗೆ ಏರುತ್ತಿದ್ದರಂತೆ.
ಸಿನೆಮಾ ಪತ್ರಕರ್ತರೊಬ್ಬರಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ರಣಬೀರ್ ಕಪೂರ್ ಆಲಿಯಾ ಭಟ್ ಬಗ್ಗೆ ಮಾತನಾಡಿದ್ದು, ಸದ್ಯದಲ್ಲಿಯೇ ಮದುವೆಯಾಗುವುದಾಗಿಯೂ ಹೇಳಿಕೊಂಡಿದ್ದಾರೆ.
ಕಳೆದ ಲಾಕ್ ಡೌನ್ ಸಮಯದಲ್ಲಿ ಮುಂಬೈಯಲ್ಲಿ ಇವರಿಬ್ಬರೂ ಜೊತೆಯಾಗಿ ವಾಸವಾಗಿದ್ದರು. ಸಾಕಷ್ಟು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡಿರುವ ಇವರು ತಮ್ಮ ಜೀವನದಲ್ಲಿ ಮುಂದಿನ ಹಂತಕ್ಕೆ ಹೋಗಲು ಬಯಸಿದ್ದಾರೆ.ರಣಬೀರ್ ಕಪೂರ್ ತನ್ನ ಪ್ರೇಯಸಿ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ನನ್ನ ಸ್ನೇಹಿತೆ ಆಲಿಯಾ ಸಾಕಷ್ಟು ಸಾಧನೆ ಮಾಡಿದ್ದಾಳೆ, ಗಿಟಾರ್ ನಿಂದ ಹಿಡಿದು ಚಿತ್ರಕಥೆ ಬರೆಯುವವರೆಗೆ ತರಬೇತಿ ಪಡೆದುಕೊಂಡಿದ್ದಾಳೆ. ಅವಳಷ್ಟು ನಾನು ಸಾಧನೆ ಮಾಡಿಲ್ಲ, ಕಲಿತಿಲ್ಲ ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ. ಆರಂಭದಲ್ಲಿ ನಮ್ಮ ಕುಟುಂಬದಲ್ಲಿ ಸಮಸ್ಯೆಗಳಿದ್ದವು, ನಂತರ ಓದು, ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯುತ್ತಾ ಹೋದೆನು, ಪ್ರತಿದಿನ ಎರಡರಿಂದ ಮೂರು ಸಿನೆಮಾ ವೀಕ್ಷಿಸುತ್ತೇನೆ ಎಂದು ರಣಬೀರ್ ಕಪೂರ್ ಹೇಳಿಕೊಂಡಿದ್ದಾರೆ.
ಆಯನ್ ಮುಖರ್ಜಿಯವರ ಮುಂದಿನ ಚಿತ್ರ ಬ್ರಹ್ಮಾಸ್ತ್ರದಲ್ಲಿ ಈ ಜೋಡಿ ತೆರೆ ಹಂಚಿಕೊಳ್ಳುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


