ಲಾಕ್ ಡೌನ್ ಮಧ್ಯೆ ದಿಶಾ ಪಟಾನಿಯ ಮಾದಕ 'ಕಿಲ್ಲರ್ ಡ್ಯಾನ್ಸ್' ವಿಡಿಯೋ ವೈರಲ್!
ಲಾಕ್ ಡೌನ್ ಮಧ್ಯೆ ಬಾಲಿವುಡ್ ನಟಿ ಹಾಗೂ ಫಿಟ್ನೆಸ್ ಉತ್ಸಾಹಿ ದಿಶಾ ಪಟಾನಿ ಸಾಮಾಜಿಕ ಮಾಧ್ಯಮಗಳಲ್ಲಿ ರಸವತ್ತಾದ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಮುಂಬೈ: ಲಾಕ್ ಡೌನ್ ಮಧ್ಯೆ ಬಾಲಿವುಡ್ ನಟಿ ಹಾಗೂ ಫಿಟ್ನೆಸ್ ಉತ್ಸಾಹಿ ದಿಶಾ ಪಟಾನಿ ಸಾಮಾಜಿಕ ಮಾಧ್ಯಮಗಳಲ್ಲಿ ರಸವತ್ತಾದ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಬೆಯೋನ್ಸ್ ಟ್ರಾಕ್ 'ಯೋನ್ಸ್ ಗೆ'' ದಿಶಾ ಪಟಾನಿ ದೇಹ ಸಿರಿ ಪ್ರದರ್ಶಿಸಿ ಕಿಲ್ಲರ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಇತ್ತೀಚಿಗೆ ತಮ್ಮ ಇನ್ಸಾಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ವಿಶ್ವದಾದ್ಯಂತ ವೈರಲ್ ಆಗಿದೆ.
ಈ ವಿಡಿಯೋ ಸಾಕಷ್ಟು ಅಭಿಮಾನಿಗಳ ಹೃದಯವನ್ನು ಗೆದ್ದಿದ್ದು, ಎಲ್ಲಿ ಅವ್ರಾಮ್ ಸೇರಿದಂತೆ ಅನೇಕ ಅಭಿಮಾನಿಗಳು, ಸ್ನೇಹಿತರು ಮೆಚ್ಚಿಕೊಂಡಿದ್ದಾರೆ. ನೃತ್ಯ ಕೌಶಲ್ಯದಿಂದ ಜನಪ್ರಿಯರಾಗಿರುವ ದಿಶಾ ಪಟಾನಿ, ಅನೇಕ ಸಂಗೀತ ವಿಡಿಯೋ, ವಿಶೇಷ ಹಾಡುಗಳ ಭಾಗವಾಗಿದ್ದಾರೆ. ಇತ್ತೀಚಿಗೆ ಭಾಘಿ -3 ಚಿತ್ರದ ಗೀತೆಯೊಂದಕ್ಕೆ ಹೆಜ್ಜೆ ಹಾಕಿದ್ದರು.
ದಿಶಾ ಕೊನೆಯ ಬಾರಿಗೆ "ಮಲಾಂಗ್" ಚಿತ್ರದಲ್ಲಿ ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಕುನಾಲ್ ಕೆಮ್ಮು ಕೂಡ ಇದ್ದಾರೆ. ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಮುಂದಿನ ರಾಧೆ, ಯುವರ್ ಮೋಸ್ಟ್ ವಾಂಟೆಡ್ ಭಾಯ್" ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


