ಪಿಎಂ ಕೇರ್ಸ್ ನಿಧಿಗೆ ಅಕ್ಷಯ್ ಕುಮಾರ್ ೨೫ ಕೋಟಿಗೆ ದೇಣಿಗೆ ನೀಡಿದ್ದು ತಪ್ಪು: ಶತ್ರುಘ್ನ ಸಿನ್ಹಾ ಆಕ್ಷೇಪ
ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ ’ಪಿಎಂ- ಕೇರ್ಸ್’ ನಿಧಿಗೆ ೨೫ ಕೋಟಿರೂ ಭಾರಿ ಮೊತ್ತ ನೀಡಿರುವುದು ದೊಡ್ಡ ತಪ್ಪು ಎಂದು ಬಾಲಿವುಡ್ ಹಿರಿಯ ನಟ, ಕಾಂಗ್ರೆಸ್ ಮುಖಂಡ ಶತ್ರುಘ್ನ ಸಿನ್ಹಾ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮುಂಬೈ: ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ ’ಪಿಎಂ- ಕೇರ್ಸ್’ ನಿಧಿಗೆ ೨೫ ಕೋಟಿರೂ ಭಾರಿ ಮೊತ್ತ ನೀಡಿರುವುದು ದೊಡ್ಡ ತಪ್ಪು ಎಂದು ಬಾಲಿವುಡ್ ಹಿರಿಯ ನಟ, ಕಾಂಗ್ರೆಸ್ ಮುಖಂಡ ಶತ್ರುಘ್ನ ಸಿನ್ಹಾ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇಷ್ಟು ದೊಡ್ಡ ಮೊತ್ತ ದೇಣಿಗೆ ನೀಡುವುದೆಂದರೆ ಇತರರನ್ನು ಹೀಯಾಳಿಸಿದಂತೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ, ಅಕ್ಷಯ್ ಕುಮಾರ್ ಪಿ ಎಂ ಕೇರ್ಸ್ ನಿಧಿಗೆ ೨೫ ಕೋಟಿ ರೂ ದೊಡ್ಡ ದೇಣಿಗೆ ನೀಡುವ ಜತೆಗೆ, ಮುಂಬೈ ಮಹಾನಗರ ಪಾಲಿಕೆಗೆ ೩ ಕೋಟಿ ದೇಣಿಗೆ ಪ್ರಕಟಿಸಿ ಸ್ಚಚ್ಚತಾ ಕಾರ್ಮಿಕರಿಗೆ ಅಗತ್ಯವಾಗಿರುವ ವ್ಯಕ್ತಿಗತ ರಕ್ಷಣಾ ಪರಿಕರಗಳು, ತ್ವರಿತ ಟೆಸ್ಟಿಂಗ್ ಕಿಟ್ ಗಳ ಪೂರೈಕೆಗೆ ಈ ಹಣ ನೀಡುವುದಾಗಿ ಪ್ರಕಟಿಸಿದ್ದಾರೆ. ಆದರೆ, ಶತ್ರುಘ್ನ ಸಿನ್ಹಾ ಇಷ್ಟು ದೊಡ್ಡ ಪ್ರಮಾಣದ ದೇಣಿಗೆ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಣಿಗೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಅದನ್ನು ಏಕೆ ಬಹಿರಂಗವಾಗಿ ಹೇಳಿಕೊಳ್ಳಬೇಕು..? ಎಂದು ಸಿನ್ಹಾ ಪ್ರಶ್ನಿಸಿದ್ದಾರೆ. ಭಾರಿ ಪ್ರಮಾಣದ ದೇಣಿಗೆ ನೀಡುವ ಮೂಲಕ ಇತರರನ್ನು ಹೀಯಾಳಿಸದಂತಾಗುತ್ತದೆ ಏಕೆಂದರೆ..ಉಳಿದವರು ಅಕ್ಷಯ್ ನೀಡಿದ ದೇಣಿಗೆಗೆ ಹೋಲಿಸಿಕೊಂಡು.. ತಾವು ನೀಡುತ್ತಿರುವುದು ಅತ್ಯಂತ ಚಿಕ್ಕಮೊತ್ತ ಎಂದು ದೇಣಿಗೆ ನೀಡುವುದನ್ನೇ ನಿಲ್ಲಿಸಿಬಿಡುತ್ತಾರೆ. ವಿಶ್ವದ ಇತರೆಡೆ, ಸೆಲೆಬ್ರಿಟಿಗಳು ಇಷ್ಟು ದೊಡ್ಡ ಪ್ರಮಾಣದ ದೇಣಿಗೆ ನೀಡಿ ದೊಡ್ಡದಾಗಿ ಹೇಳಿಕೊಂಡಿಲ್ಲ ಎಂದು ಸಿನ್ಹಾ ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


