ನಿಲ್ಲದ ರಾಮಾಯಣ: ಸೋನಾಕ್ಷಿ ಕಾಲೆಳೆಯುತ್ತಿರುವವರ ವಿರುದ್ಧ ಗರಂ ಆದ ಶತ್ರುಘ್ನ ಸಿನ್ಹಾ!
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ದಡ್ಡಿ ಎಂದು ಕಾಲೆಳೆಯುತ್ತಿರುವವರ ವಿರುದ್ಧ ನಟ ಕಮ್ ರಾಜಕಾರಣಿ ಶತ್ರುಘ್ನ ಸಿನ್ಹಾ ಗರಂ ಆಗಿದ್ದಾರೆ.

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ದಡ್ಡಿ ಎಂದು ಕಾಲೆಳೆಯುತ್ತಿರುವವರ ವಿರುದ್ಧ ನಟ ಕಮ್ ರಾಜಕಾರಣಿ ಶತ್ರುಘ್ನ ಸಿನ್ಹಾ ಗರಂ ಆಗಿದ್ದಾರೆ.
ಸೋನಾಕ್ಷಿಯನ್ನು ದಡ್ಡಿ ಎಂದು ಬಿಂಬಿಸುತ್ತಿರುವುದನ್ನು ಗಮನಿಸಿದ ಶತ್ರುಘ್ನ ಸಿನ್ಹಾ ಅವರು ಖಾಮೋಶ್ ಎಂದು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.
ಈ ಹಿಂದೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೋನಾಕ್ಷಿ ಸಿನ್ಹಾ ಅವರಿಗೆ ರಾಮಯಾಣದಲ್ಲಿ ಹನುಮಂತ ಸಂಜೀವಿನಿ ಪರ್ವತವನ್ನು ತಂದಿದ್ದು ಯಾರ ಚಿಕಿತ್ಸೆಗಾಗಿ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸದ ಸೋನಾಕ್ಷಿ ಲೈಫ್ ಲೈನ್ ತೆಗೆದುಕೊಂಡಿದ್ದರು. ಈ ವಿಚಾರ ಅಂದು ಸಖತ್ ಟ್ರೋಲ್ ಆಗಿತ್ತು.
ಇದೀಗ ದೂರದರ್ಶನದಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ಪ್ರಸಾರವಾಗುತ್ತಿರುವ ಕುರಿತು ಹಿರಿಯ ನಟ ಮಹಾಭಾರತದಲ್ಲಿ ಭೀಷ್ಮನಾಗಿ ಅಭಿನಯಿಸಿದ್ದ ಮುಖೇಶ್ ಖನ್ನಾ ಅವರು ಖುಷಿ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ನಮ್ಮ ಪುರಾಣದ ಬಗ್ಗೆ ಅರಿವಿಲ್ಲದವರೂ ಧಾರಾವಾಹಿಗಳನ್ನು ನೋಡಿ ತಿಳಿದುಕೊಳ್ಳಬಹುದು ಎಂದು ಸೋನಾಕ್ಷಿ ಹೆಸರು ಹೇಳದೆಯೇ ಕಾಲೆಳೆದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು. ಇದಕ್ಕೆ ಶತ್ರುಘ್ನ ಸಿನ್ಹಾ ಗರಂ ಆಗಿದ್ದು ತಮ್ಮ ಶೈಲಿಯಲ್ಲಿ ಖಾಮೋಶ್ ಎಂದು ಟ್ವೀಟಿಸಿದ್ದಾರೆ.
ಇದರ ಜೊತೆಗೆ ಮುಖೇಶ್ ಖನ್ನಾ ಅವರ ಹೆಸರು ಪ್ರಸ್ಥಾಪಿಸದೆ, ಅವರೇನು ಹಿಂದೂ ಧರ್ಮದ ರಕ್ಷಕ ಎಂದು ತಿಳಿದುಕೊಂಡಿದ್ದಾರಾ? ಕೇವಲ ಒಂದು ಪ್ರಶ್ನೆಗೆ ಉತ್ತರಿಸದೆ ಹೋದರೆ ಅವರಿಗೆ ನಮ್ಮ ಪುರಾಣಗಳ ಗೊತ್ತಿಲ್ಲ ಅಂತ ಭಾವಿಸುವುದು ಮುರ್ಖತನ ಎಂದು ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


