ಸೆಕ್ಸ್ ಬೇಕೆನಿಸಿದರೆ ಮಾಡಿಬಿಡಿ, ಪೋಷಕರು ಮಕ್ಕಳ ಜವಾಬ್ದಾರಿಯುತ ಸೆಕ್ಸ್ ಗೆ ಪ್ರೋತ್ಸಾಹಿಸಬೇಕು: ಕಂಗನಾ
ಬಾಲಿವುಡ್ ನಟಿ ಕಂಗನಾ ರನೌತ್ ಇಂಡಿಯಾ ಟುಡೆ ಮೈಂಡ್ ರಾಕ್ಸ್ 2019 ರಲ್ಲಿ ಭಾಗವಹಿಸಿ ಮಾತನಾಡಿದ್ದು, ಹುಬ್ಬೇರಿಸುವ ಹೇಳಿಕೆ ನೀಡಿದ್ದಾರೆ.

ಬಾಲಿವುಡ್ ನಟಿ ಕಂಗನಾ ರನೌತ್ ಇಂಡಿಯಾ ಟುಡೆ ಮೈಂಡ್ ರಾಕ್ಸ್ 2019 ರಲ್ಲಿ ಭಾಗವಹಿಸಿ ಮಾತನಾಡಿದ್ದು, ಹುಬ್ಬೇರಿಸುವ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಕಂಗನಾ, ತಮ್ಮ ಮೊದಲ ಕ್ರಶ್ ಹಾಗೂ ಜೀವನದ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಲೈಂಗಿಕತೆಯನ್ನು ನಮ್ಮ ದೇಶದಲ್ಲಿ ಅಪರಾಧವೆಂಬಂತೆ ಪರಿಗಣಿಸಲಾಗುತ್ತದೆ. ಸೆಕ್ಸ್ ಪ್ರತಿಯೊಬ್ಬರ ಜೀವನದಲ್ಲೂ ಮಹತ್ವದ ಸಂಗತಿ, ಸೆಕ್ಸ್ ಬೇಕು ಎನಿಸಿದಲ್ಲಿ ಮಾಡಿಬಿಡಿ, ಅದಕ್ಕಾಗಿ ಕೊರಗುತ್ತಿರಬೇಡಿ ಎಂದು ಹೇಳಿದ್ದಾರೆ.
ಹಿಂದಿನ ಕಾಲದಲ್ಲೆಲ್ಲಾ ನಿಮಗೆ ನಿರ್ದಿಷ್ಟ ವ್ಯಕ್ತಿಯನ್ನು ವಿವಾಹವಾಗುವಂತೆ ಹೇಳುತ್ತಿದ್ದರು. ಭಾವನೆಗಳನ್ನು ಆ ವ್ಯಕ್ತಿಯ ಜೊತೆಗೆ ಹಂಚಿಕೊಳ್ಳಬೇಕಾಗುತ್ತಿತ್ತು. ಇತಿಹಾಸದಲ್ಲಿನ ಆಕ್ರಮಣಗಳಿಂದಾಗಿ ಜನರ ಚಿಂತನೆಗಳಲ್ಲಿ ’ಧರ್ಮಗ್ರಂಥಗಳಲ್ಲಿ ಸೆಕ್ಸ್ ನ್ನು ಬಹಿಷ್ಕಾರಿಸಬೇಕೆಂಬುದು ಉಳಿದುಹೋಗಿದೆ. ಮಕ್ಕಳು ಜವಾಬ್ದಾರಿಯುತ ಸೆಕ್ಸ್ ನಲ್ಲಿ ತೊಡಗಿದರೆ ಪೋಷಕರು ಸಂತಸಪಡಬೇಕು, ನಾನು ಲೈಂಗಿಕವಾಗಿ ಸಕ್ರಿಯಳಾಗಿದ್ದೇನೆಂಬುದನ್ನು ತಿಳಿದ ನನ್ನ ಪೋಷಕರು ಅಘಾತಕ್ಕೊಳಗಾಗಿದ್ದರು. ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


