ಬಾಲಿವುಡ್

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಮಿಷನ್ ಮಂಗಲ್'; 200 ಕೋಟಿ ಕ್ಲಬ್ ಸೇರಿದ ಅಕ್ಷಯ್ ಕುಮಾರ್ ಚಿತ್ರ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಂಗಳಯಾನ ಯೋಜನೆ ಕುರಿತಾದ 'ಮಿಷನ್ ಮಂಗಲ್' ಬಾಲಿವುಡ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, ಚಿತ್ರ ಇದೀಗ 200 ಕೋಟಿ ಗಳಿಕೆ ಮಾಡಿದೆ.

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಮಿಷನ್ ಮಂಗಲ್'; 200 ಕೋಟಿ ಕ್ಲಬ್ ಸೇರಿದ ಅಕ್ಷಯ್ ಕುಮಾರ್ ಚಿತ್ರ
ಮಿಷನ್ ಮಂಗಲ್
Published On :

ಮುಂಬೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಂಗಳಯಾನ ಯೋಜನೆ ಕುರಿತಾದ 'ಮಿಷನ್ ಮಂಗಲ್' ಬಾಲಿವುಡ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, ಚಿತ್ರ ಇದೀಗ 200 ಕೋಟಿ ಗಳಿಕೆ ಮಾಡಿದೆ.

ಆ ಮೂಲಕ ಮಿಷನ್ ಮಂಗಲ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, 200 ಕೋಟಿ ರೂ ಗಳಿಕೆ ಮಾಡಿದ ಅಕ್ಷಯ್ ಕುಮಾರ್ ಅವರ ಮೊದಲ ಚಿತ್ರ ಎಂಬ ಕೀರ್ತಿಗೂ ಭಾಜನವಾಗಿದೆ. ಮೂಲಗಳ ಪ್ರಕಾರ ಮಿಷನ್ ಮಂಗಲ್ ಚಿತ್ರ ತೆರೆಕಂಡ ನಾಲ್ಕು ವಾರಗಳ ಅಂತ್ಯಕ್ಕೆ 200.16 ಕೋಟಿ ರೂ ಗಳಿಕೆ ಮಾಡಿದೆ.

ಈ ಕುರಿತಂತೆ ಖ್ಯಾತ ಸಿನಿಮಾ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ಮಿಷನ್ ಮಂಗಲ್ ಚಿತ್ರ ಹೊಸ ದಾಖಲೆ ಬರೆದಿದ್ದು, ಸ್ವತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಿ 200 ಕೋಟಿ ರೂ ಗಳಿಸಿದ ಮೊದಲ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ. ಅಲ್ಲದೆ 200 ಕೋಟಿ ರೂ ಗಳಿಸಿದ ಫಾಕ್ಸ್ ಸ್ಟುಡಿಯೋಸ್ ನ ಮೂರನೇ ಚಿತ್ರವಾಗಿದೆ. ಈ ಹಿಂದೆ ಈ ಸಂಸ್ಥೆಯ ಏಕ್ ಥಾ ಟೈಗರ್, ಸಂಜು (342.53 ಕೋಟಿ)ಮತ್ತು ಪ್ರೇಮ್ ರತನ್ ಧನ್ ಪಾಯೋ (210.16 ಕೋಟಿ)ಚಿತ್ರ 200 ಕೋಟಿ ರೂ ಗಳಿಸಿತ್ತು. ಇದೀಗ ಈ ಪಟ್ಟಿಗೆ ಮಿಷನ್ ಮಂಗಲ್ (200.16 ಕೋಟಿ) ಸೇರ್ಪಡೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.