ಬಾಲಿವುಡ್

ಐಶ್ವರ್ಯಾ ರೈ ಕುರಿತ ಟ್ವೀಟ್ ನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ ವಿವೇಕ್ ಒಬೆರಾಯ್

ಬಾಲಿವುಡ್ ತಾರೆ ಐಶ್ವರ್ಯಾ ರೈ ಅವರ ವೈಯಕ್ತಿಕ ಜೀವನ ಕುರಿತ ಮೀಮ್ ಟ್ವೀಟ್ ನ್ನು ಶೇರ್ ಮಾಡಿ ...

ಐಶ್ವರ್ಯಾ ರೈ ಕುರಿತ ಟ್ವೀಟ್ ನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ ವಿವೇಕ್ ಒಬೆರಾಯ್
ವಿವೇಕ್ ಒಬೆರಾಯ್
Published On :
ಮುಂಬೈ: ಬಾಲಿವುಡ್ ತಾರೆ ಐಶ್ವರ್ಯಾ ರೈ ಅವರ ವೈಯಕ್ತಿಕ ಜೀವನ ಕುರಿತ ಮೀಮ್ ಟ್ವೀಟ್ ನ್ನು ಶೇರ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನಟ ವಿವೇಕ್ ಒಬೆರಾಯ್ ಈಗ ಅದನ್ನು ಡಿಲೀಟ್ ಮಾಡಿದ್ದಾರೆ. ಐಶ್ವರ್ಯಾ ರೈರನ್ನು ಲೋಕಸಭೆ ಚುನಾವಣೆಯ ಸಾರ್ವಜನಿಕ ಅಭಿಪ್ರಾಯ, ಎಕ್ಸಿಟ್ ಪೋಲ್‌ಗೆ ಹೋಲಿಸಿ ಮಾಡಲಾಗಿದ್ದ ಮೀಮ್ ಟ್ವೀಟ್ ನ್ನು ವಿವೇಕ್ ಒಬೆರಾಯ್ ರಿಟ್ವೀಟ್ ಮಾಡಿ ಕಮೆಂಟ್ ಮಾಡಿದ್ದರು.
2000ನೇ ಇಸವಿಯ ಆರಂಭದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಜೊತೆ ಡೇಟಿಂಗ್ ನಲ್ಲಿದ್ದ ವಿವೇಕ್ ಒಬೆರಾಯ್ ಟ್ವೀಟ್ ಸಾಕಷ್ಟು ವಿವಾದಕ್ಕೆ ಒಳಗಾಗಿ ಹಲವಾರು ಮಂದಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
"ಒಮ್ಮೊಮ್ಮೆ ಕೆಲವು ಸಂಗತಿಗಳನ್ನು ನೋಡಿದ ಕೂಡಲೆ ನಮಗೆ ಫನ್ನಿ ಅನ್ನಿಸುತ್ತವೆ. ಆದರೆ ಕೆಲವರಿಗೆ ಆ ರೀತಿ ಅನ್ನಿಸುವುದಿಲ್ಲ. ಕಳೆದ ಹತ್ತು ವರ್ಷಗಳಿಂದ ನಾನು ಸುಮಾರು ಎರಡು ಸಾವಿರಕ್ಕೂ ಅಧಿಕ ಅಷ್ಟಾಗಿ ಸವಲತ್ತುಗಳಿಲ್ಲದ ಹೆಣ್ಣುಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ವಿಷಯ ಹೀಗಿರಬೇಕಾದರೆ ನಾನು ಓರ್ವ ಮಹಿಳೆ ಬಗ್ಗೆ ಕೆಟ್ಟದಾಗಿ ನಡೆದುಕೊಳ್ಳುತ್ತೇನೆ ಎಂಬುದನ್ನು ಊಹಿಸುವುದೂ ಕಷ್ಟ. ಯಾರೋ ಕ್ರಿಯೇಟ್ ಮಾಡಿದ ಒಂದು ಫೋಟೋಗೆ ತಮಾಷೆಗೆ ನಾನು ರಿಪ್ಲೈ ನೀಡುವುದರಿಂದ ಓರ್ವ ಮಹಿಳೆಗೆ ನೋವಾಗುತ್ತದೆ ಎಂದರೆ ನಾನು ಅವರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ. ಆ ಟ್ವೀಟನ್ನು ಡಿಲೀಟ್ ಮಾಡಿದ್ದೇನೆ" ಎಂದಿದ್ದಾರೆ ವಿವೇಕ್ ಒಬೆರಾಯ್.
ಯಾರೋ ಕಳುಹಿಸಿದ್ದ ಮೀಮನ್ನು ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು ವಿವೇಕ್ ಒಬೆರಾಯ್. "ಹಹ! ಒಳ್ಳೆ ಸೃಜನಾತ್ಮಕವಾಗಿದೆ! ಯಾವುದೇ ರಾಜಕೀಯ ಬೇಡ.... ಜಸ್ಟ್ ಲೈಫ್" ಎಂದು ಕಾಮೆಂಟ್ ಮಾಡಿ ಪೋಸ್ಟ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.