ನನ್ನ ಕೆಲ ಸ್ನೇಹಿತರು ಸಲಿಂಗಕಾಮಿಗಳು, ನಾನು ಬೇಡ ಅಂದರೂ...? ಕನ್ನಡದ ನಟಿ ರೆಜಿನಾ, ವಿಡಿಯೋ!
ನಾನು ಚಿಕ್ಕವಯಸ್ಸಿನಲ್ಲೇ ಬ್ಲೂ ಫಿಲ್ಮಂಗಳನ್ನು ನೋಡಿದ್ದೇ ಎಂದು ಬೋಲ್ಡ್ ಹೇಳಿಕೆ ನೀಡಿದ್ದ ಕನ್ನಡದ ಸೂರ್ಯಕಾಂತಿ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ರೆಜಿನಾ ಕಸ್ಸಂದ್ರ ಅವರು ಇದೀಗ ಬೋಲ್ಡ್ ಹೇಳಿಕೆ...

Published On :
ನಾನು ಚಿಕ್ಕವಯಸ್ಸಿನಲ್ಲೇ ಬ್ಲೂ ಫಿಲ್ಮಂಗಳನ್ನು ನೋಡಿದ್ದೇ ಎಂದು ಬೋಲ್ಡ್ ಹೇಳಿಕೆ ನೀಡಿದ್ದ ಕನ್ನಡದ ಸೂರ್ಯಕಾಂತಿ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ರೆಜಿನಾ ಕಸ್ಸಂದ್ರ ಅವರು ಇದೀಗ ಬೋಲ್ಡ್ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ರೆಜಿನಾ ಸಂದರ್ಶನವೊಂದರಲ್ಲಿ ನಾನು ಹದಿಹರೆಯದ ವಯಸ್ಸಿನಲ್ಲೇ ಬ್ಲೂ ಫಿಲ್ಮಂಗಳನ್ನು ನೋಡಿದ್ದೇನೆ. ಈ ಕಾಲದಲ್ಲಿ ಇದೆಲ್ಲ ಕಾಮನ್ ಎಂದು ಹೇಳಿದ್ದರು. ಇದೀಗ ನನ್ನ ಕೆಲ ಸ್ನೇಹಿತರು ಸಲಿಂಗಕಾಮಿಗಳಾಗಿದ್ದರು. ಅದು ನನಗೆ ಗೊತ್ತಾಗಿದ್ದು ನಾನು ಬಾಲಿವುಡ್ ನ ಏಕ್ ಲಡ್ಕಿ ಕೊ ದೇಖಾ ತೋ ಐಸಾ ಲಗಾ ಚಿತ್ರದಲ್ಲಿ ನಟಿಸಿದಾಗ ಎಂದು ರೆಜಿನಾ ಹೇಳಿದ್ದಾರೆ.
ರೆಜಿನಾ ಈ ಚಿತ್ರದಲ್ಲಿ ಸಲಿಂಗಕಾಮಿ ಸ್ತ್ರೀ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟಿ ಸೋನಂ ಕಪೂರ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಲಿಂಗಕಾಮಿ ಪಾತ್ರವನ್ನು ನನ್ನ ಸ್ನೇಹಿತರು ಮೆಚ್ಚಿಕೊಂಡಿದ್ದರು. ಬಹಳ ಖುಷಿ ಪಟ್ಟಿದ್ದರು. ಅಲ್ಲದೆ ನನ್ನ ಸ್ನೇಹಿತರಲ್ಲಿ ಬಹಳ ಜನ ಸಲಿಂಗಕಾಮಿಗಳು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


