ಬಡ ಮಹಿಳೆಯ ಕಂಚಿನ ಕಂಠಕ್ಕೆ ಮನಸೋತ ಹಿಮೇಶ್ ರೇಶಮಿಯಾ: ಚಿತ್ರದಲ್ಲಿ ಹಾಡಲು ಅವಕಾಶ
ಹೊಟ್ಟೆ ಪಾಡಿಗಾಗಿ ಪಶ್ಚಿಮ ಬಂಗಾಳದಲ್ಲಿ ಹಾಡು ಹೇಳಿ ಭಿಕ್ಷೆ ಬೇಡಿ ಬದುಕುತ್ತಿದ್ದ ರಾನು ಮಂಡಲ್ ರಾತ್ರೋ ರಾತ್ರಿ ದೇಶಾದ್ಯಂತ ಮನೆಮಾತಾಗಿದ್ದಾರೆ.

ಮುಂಬೈ: ಹೊಟ್ಟೆ ಪಾಡಿಗಾಗಿ ಪಶ್ಚಿಮ ಬಂಗಾಳದಲ್ಲಿ ಹಾಡು ಹೇಳಿ ಭಿಕ್ಷೆ ಬೇಡಿ ಬದುಕುತ್ತಿದ್ದ ರಾನು ಮಂಡಲ್ ರಾತ್ರೋ ರಾತ್ರಿ ದೇಶಾದ್ಯಂತ ಮನೆಮಾತಾಗಿದ್ದಾರೆ.
ಲತಾ ಮಂಗೇಶ್ಕರ್ ಅವರ 'ಎಕ್ ಪ್ಯಾರ್ ಕಾ ನಗ್ಮಾ ಹೈ' ಹಾಡನ್ನು ರಾನು ಮಂಡಲ್ ರೈಲ್ವೆ ನಿಲ್ದಾಣವೊಂದರಲ್ಲಿ ಹಾಡುತ್ತಿದ್ದಾಗ ಯಾರೂ ಒಬ್ಬರು ಚಿತ್ರಿಸಿ ವೈರಲ್ ಮಾಡಿದರು. ಇದಾದ ಬಳಿಕ ಮಂಡಲ್ ಅವರನ್ನು ಬಾಲಿವುಡ್ ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಅವರು ಕರೆದು ತಮ್ಮ ಮುಂದಿನ ಚಿತ್ರಕ್ಕೆ ಹಾಡು ಹಾಡಿಸಿದ್ದಾರೆ.
ಕೃಷ್ಣನಗರದಲ್ಲಿ ಜನಿಸಿ ಬಾಲ್ಯವನ್ನು ಅಲ್ಲಿಯೇ ಕಳೆದಿರುವ ಇವರು ನಂತರ ಸಂಪಾದನೆಗಾಗಿ ಮುಂಬೈಗೆ ಬಂದಿದ್ದಾರೆ. ಆದರೆ, ಮಾನಸಿಕ ಖಿನ್ನತೆಗೊಳಗಾಗಿ ಮತ್ತೆ ರಣಘಾತ್ ಗೆ ಹಿಂತಿರುಗಿದ್ದಾರೆ. ಇತ್ತೀಚಿಗೆ ರಾನು ಅವರನ್ನು ಟಿವಿ ರಿಯಾಲಿಟಿ ಶೋವೊಂದಕ್ಕೆ ಆಹ್ವಾನಿಸಲಾಗಿತ್ತು. ಈ ಶೋನಲ್ಲಿ ರಾನು ಅವರ ಗಾಯನಕ್ಕೆ ಪಿಧಾ ಆದ ಜಡ್ಜ್ ಹಿಮೇಶ್ ರೇಶಮಿಯಾ, ಅವರ ಮುಂದಿನ ಚಿತ್ರದಲ್ಲಿ ಹಾಡೊಂದನ್ನು ಹಾಡಲು ಅವಕಾಶ ನೀಡಿದ್ದಾರೆ.
ಹಿಮೇಶ್ ರೇಶಮಿಯಾ ಅವರ ಮುಂದಿನ 'ಹ್ಯಾಪಿ ಹಾರ್ಡಿ ಮತ್ತು ಹೀರ್ " ಚಿತ್ರದಲ್ಲಿ ರಾನು ಮಂಡಲ್ ಹಾಡಿರುವ 'ತೇರಿ ಮೇರಿ ಕಹಾನಿ' ಗೀತೆಯನ್ನು ಹಿಮೇಶ್ ರೇಶಮಿಯಾ ತಮ್ಮ ಇನ್ಸಾಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ರಾನು ಮಂಡಲ್ ಟಿವಿ ಶೋವೊಂದಕ್ಕೆ ಬರುವ ಮುಂಚೆ ಸಲೊನ್ ವೊಂದನ್ನು ನಡೆಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಹಿಮೇಶ್ ಅವರ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ಪ್ರತಿಭಾವಂತರನ್ನು ಕಂಡರೆ ನೆರವು ನೀಡುವಂತೆ ತಮ್ಮಗೆ ಸಲ್ಮಾನ್ ಖಾನ್ ತಂದೆ ಸಲಹೆ ನೀಡಿದ್ದರು ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


