ಪ್ರಿಯಾಂಕಾ ಮದುವೆಗೂ ಮುನ್ನವೇ ಭಾವಿ ಮಾವ ನಿಕ್ ತಂದೆ ದಿವಾಳಿ!
ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಮಿಂಚು ಹರಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅವರು ಶೀಘ್ರದಲ್ಲೇ ಅಮೆರಿಕ ಮೂಲದ ತಮ್ಮ ಗೆಳೆಯ ನಿಕ್ ಜೋನಾಸ್ ಅವರನ್ನು...

Published On :
ಮುಂಬೈ: ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಮಿಂಚು ಹರಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅವರು ಶೀಘ್ರದಲ್ಲೇ ಅಮೆರಿಕ ಮೂಲದ ತಮ್ಮ ಗೆಳೆಯ ನಿಕ್ ಜೋನಾಸ್ ಅವರನ್ನು ವಿವಾಹವಾಗಲಿದ್ದು ಈ ಮಧ್ಯೆ ಪ್ರಿಯಾಂಕಾ ಚೋಪ್ರಾರ ಭಾವಿ ಮಾವ ದಿವಾಳಿಯಾಗಿರುವ ಸುದ್ದಿ ಹೊರಬಿದ್ದಿದೆ.
ಅಮೆರಿಕದಲ್ಲಿ ನಿಕ್ ರ ತಂದೆ ಪೌಲ್ ಜೋನ್ಸ್ ರಿಯಲ್ ಎಸ್ಟೇಟ್ ಕಂಪನಿಯೊಂದನ್ನು ನಡೆಸುತ್ತಿದ್ದು ಅದೀಗ ಭಾರೀ ಸಾಲದ ಸುಳಿಗೆ ಸಿಲುಕಿದೆ. ಕಂಪನಿ ಅಂದಾಜು 71 ಕೋಟಿ ರುಪಾಯಿ ನಷ್ಟದಲ್ಲಿರುವ ಕಾರಣ ದಿವಾಳಿ ಕೋರಿ ನ್ಯಾಯಾಲಯದ ಮೊರೆ ಹೋಗಿದೆ.
ಇನ್ನು ಪ್ರಿಯಾಂಕರನ್ನು ವರಿಸುತ್ತಿರುವ ನಿಕ್ ಅಂದಾಜು 177 ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರಿಂದಾಗಿ ಇಬ್ಬರ ಸಂಬಂಧಕ್ಕೆ ಧಕ್ಕೆ ಬರುವ ಯಾವುದೇ ಸಾಧ್ಯತೆ ಇಲ್ಲ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bollywoodಬಾಲಿವುಡ್priyanka chopraಪ್ರಿಯಾಂಕಾ ಚೋಪ್ರಾದಿವಾಳಿbankruptcyNick Jonasನಿಕ್ ಜೋನಾಸ್Paul Jonasಪೌಲ್ ಜೋನಾಸ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


