ನಾನಿನ್ನು ಕನ್ಯೆ: ವಿವಾಹಕ್ಕೂ ಮುನ್ನ 'ಕನ್ಯತ್ವ' ಪ್ರೂವ್ ಮಾಡಿದ ರಾಖಿ ಸಾವಂತ್, ವೈರಲ್!
ಬಾಲಿವುಡ್ ನ ವಿವಾದಿತ ನಟಿ, ಸೆಕ್ಸಿ ಕ್ವೀನ್ ರಾಖಿ ಸಾವಂತ್ ಅವರು ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ದೀಪಕ್ ಕಲಾವ್ ಎನ್ನುವವರನ್ನು ವಿವಾಹವಾಗುತ್ತಿದ್ದಾರೆ...

Published On :
ಮುಂಬೈ: ಬಾಲಿವುಡ್ ನ ವಿವಾದಿತ ನಟಿ, ಸೆಕ್ಸಿ ಕ್ವೀನ್ ರಾಖಿ ಸಾವಂತ್ ಅವರು ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ದೀಪಕ್ ಕಲಾವ್ ಎನ್ನುವವರನ್ನು ವಿವಾಹವಾಗುತ್ತಿದ್ದಾರೆ. ಇನ್ನು ಮದುವೆ ಜೊತೆಗೆ ಇನ್ನೊಂದು ವಿಚಾರ ಸಂಚಲ ಮೂಡಿಸಿದೆ.
ಮದುವೆಗೂ ಮುನ್ನ ರಾಖಿ ಕನ್ಯತ್ವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆ ಸರ್ಟಿಫಿಕೇಟನ್ನು ಭಾವೀ ಪತಿ ದೀಪಕ್ ಕಲಾಲ್ ತಮ್ಮ ಇನ್ಸ್ ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ ರಾಖಿ ಮಾತ್ರವಲ್ಲ, ಸ್ವತಃ ದೀಪಕ್ ಅವರೂ ಕನ್ವತ್ವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಭಾವೀ ಪತಿ ದೀಪಕ್ ಕಲಾಲ್ ಅವರು ತಮ್ಮ ಇನ್ಸ್ ಟಾಗ್ರಾಮ್ ನಲ್ಲಿ ನೀನು ನನಗೆ ಹೆಮ್ಮೆ ಪಡುವಂತೆ ಮಾಡಿದ್ದೀಯಾ. ನೀನು ಬಹಳ ಪವಿತ್ರವಾಗಿದ್ದೀಯಾ. ವೈದ್ಯರು 3 ಗಂಟೆಗಳ ಕಾಲ ರಾಖಿ ದೇಹವನ್ನು ಪರೀಕ್ಷಿಸಿ ಉತ್ತಮ ಫಲಿತಾಂಶ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ತಮ್ಮ ಕನ್ಯತ್ವ ಪರೀಕ್ಷೆಯ ಸರ್ಟಿಫಿಕೇಟನ್ನು ಶೇರ್ ಮಾಡಿಕೊಂಡಿದ್ದು ಆರ್ ಯೂ ಹ್ಯಾಪಿ ಬೇಬಿ? ಎಂದು ರಾಖಿಯನ್ನು ಛೇಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


