ತನ್ನ ಸಹೋದರಿ ಅನ್ಶೂಲ್ ಕಪೂರ್‌ಗೆ 'ಅತ್ಯಾಚಾರ ಬೆದರಿಕೆ' ನಟಿ ಜಾಹ್ನವಿ ಹೆದರಿದ್ಯಾಕೆ?
ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ನಟಿ ಜಾಹ್ನವಿ ಕಪೂರ್ ಇತ್ತೀಚೆಗಷ್ಟೇ ಸಹೋದರ ಅರ್ಜುನ್ ಕಪೂರ್ ಜೊತೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದರು...

Published On :
ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ನಟಿ ಜಾಹ್ನವಿ ಕಪೂರ್ ಇತ್ತೀಚೆಗಷ್ಟೇ ಸಹೋದರ ಅರ್ಜುನ್ ಕಪೂರ್ ಜೊತೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದರು. ಈ ಶೋ ಕಳೆದ ಭಾನುವಾರ ಬಿತ್ತರಗೊಂಡಿದ್ದು ಅಲ್ಲಿಂದ ನಟಿ ಜಾಹ್ನವಿ ಕಪೂರ್ ಸಹೋದರಿ ಅನ್ಶೂಲ್ ಕಪೂರ್ ಗೆ ಅತ್ಯಾಚಾರದ ಬೆದರಿಕೆ ಬರುತ್ತಿವೆ ಎಂದು ಜಾಹ್ನವಿ ಬಹಿರಂಗಪಡಿಸಿದ್ದಾರೆ.
ಶೋನಲ್ಲಿ ಕರಣ್ ಜೋಹರ್ ಅರ್ಜುನ್ ಕಪೂರ್ ಹಾಗೂ ಜಾಹ್ನವಿ ಕಪೂರ್ ಅವರಿಗೆ ಒಂದು ಟಾಸ್ಕ್ ಕೊಡುತ್ತಾರೆ. ಆ ಟಾಸ್ಕ್ ನಂತೆ ಇಬ್ಬರಿಗೂ ನಿಮ್ಮ ಸಂಬಂಧಿಕರಿಗೆ ಕರೆ ಮಾಡಿ ಅವರಿಂದ ಹಾಯ್ ಕರಣ್, ವಾಟ್ಸ್ ಅಪ್? ಎಂದು ಹೇಳಿಸಬೇಕಿತ್ತು. ಅಂತೆ ಜಾಹ್ನವಿ ಕಪೂರ್ ತನ್ನ ಸಹೋದರಿ ಅನ್ಶೂಲ್ ಕಪೂರ್ ಗೆ ಕರೆ ಮಾಡಿದ್ದಾರೆ. ಈ ವೇಳೆ ಅರ್ಜುನ್ ಕಪೂರ್ ಅನ್ಶೂಲ್ ಗೆ ಏನು ಹೇಳಬೇಡ ಎಂದು ತಿಳಿಸಿದ್ದಾನೆ. ಗೊಂದಲದಲ್ಲಿ ಸಿಲುಕಿದ ಅನ್ಶೂಲ್ ಏನನ್ನು ಹೇಳುವುದಿಲ್ಲ ಇದರಿಂದಾಗಿ ಅರ್ಜುನ್ ಕಪೂರ್ ಟಾಸ್ಕ್ ನಲ್ಲಿ ಗೆಲ್ಲುತ್ತಾನೆ.
ಈ ಎಪಿಸೋಡ್ ಕಂಡ ಜಾಹ್ನವಿ ಕಪೂರ್ ಅನ್ಶೂಲ್ ಕಪೂರ್ ವಿರುದ್ಧ ತಿರುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುತ್ತಾ ನಿನ್ನ ಸಹೋದರಿಯ ಸಹಾಯಕ್ಕೆ ನೀನು ಬಂದಿಲ್ಲ. ನನ್ನನ್ನು ಅತ್ಯಾಚಾರ ಮಾಡುತ್ತೇನೆ ಎಂದು ಬೆದರಿಕೆ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ ಎಂದು ಜಾಹ್ನವಿ ಆತಂಕಗೊಂಡಿದ್ದಾರೆ.
ಇನ್ನು ತನ್ನ ಸಹೋದರಿ ಅನ್ಶೂಲ್ ಗೆ ಟ್ವೀಟರಿಗರು ರೇಪ್ ಬೆದರಿಕೆ ಹಾಕುತ್ತಿರುವುದಕ್ಕೆ ನಟ ಅರ್ಜುನ್ ಕಪೂರ್ ಕೋಪಕೊಂಡಿದ್ದಾರೆ. ಅಲ್ಲದೆ ತನ್ನ ಸಹೋದರಿಯನ್ನು ಕಿಚಾಯಿಸಿದ ಟ್ವೀಟರಿಗರಿಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arjun Kapoorಅರ್ಜುನ್ ಕಪೂರ್ಜಾಹ್ನವಿ ಕಪೂರ್Koffee with Karanಕಾಫಿ ವಿತ್ ಕರಣ್ಅತ್ಯಾಚಾರ ಬೆದರಿಕೆJanhvi KapoorAnshula KapoorRape Threatsಅನ್ಶೂಲ್ ಕಪೂರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


