ಕಡಿಮೆ ಬಜೆಟ್ ಚಿತ್ರವಾದ್ರೂ ಬಾಹುಬಲಿ ದಾಖಲೆ ಮುರಿದ ಬದಾಯಿ ಹೋ!
ಕಡಿಮೆ ಬಜೆಟ್ ನ ಬದಾಯಿ ಹೋ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿರುವ ಬಾಹುಬಲಿ 2 ಚಿತ್ರದ ಗಳಿಕೆಯನ್ನು ಮೀರಿಸಿ ದಾಪುಗಾಲಿಟ್ಟಿದೆ...

Published On :
ಮುಂಬೈ: ಕಡಿಮೆ ಬಜೆಟ್ ನ ಬದಾಯಿ ಹೋ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿರುವ ಬಾಹುಬಲಿ 2 ಚಿತ್ರದ ಗಳಿಕೆಯನ್ನು ಮೀರಿಸಿ ದಾಪುಗಾಲಿಟ್ಟಿದೆ.
ಚಿತ್ರ ಬಿಡುಗಡೆಯಾಗಿ ತಿಂಗಳೇ ಕಳೆದಿದ್ದೂ ಆರು ವಾರಗಳು ಕಳೆದರೂ ಗಳಿಕೆಯಲ್ಲಿ ಬಿಗಿ ಹಿಡಿತ ಹೊಂದಿರುವ ಬದಾಯಿ ಹೋ ಚಿತ್ರ 3.95 ಕೋಟಿ ಕಲೆಕ್ಷನ್ ಮಾಡಿದೆ. ಆದರೆ ಬಾಹುಬಲಿ ಆರನೇ ವಾರದಲ್ಲಿ 3.35 ಕೋಟಿ ರುಪಾಯಿ ಮಾತ್ರ ಗಳಿಕೆ ಮಾಡಿತ್ತು.
ಇನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬದಾಯಿ ಹೋ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಕುರಿತು ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಇದು ಬದಾಯಿ ಹೋ ಅತ್ಯದ್ಭುತ ಗೆಲುವು ಎಂದು ಬಣ್ಣಿಸಿದ್ದಾರೆ.
ಭಾರತದಲ್ಲಿ ಬದಾಯಿ ಹೋ ಚಿತ್ರ ಒಟ್ಟಾರೆ 132.35 ಕೋಟಿ ಗಳಿಕೆ ಮಾಡಿದ್ದು ವಿಶ್ವಾದ್ಯಂತ 215 ಕೋಟಿ ಗಳಿಕೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bollywoodಬಾಲಿವುಡ್ಬಾಕ್ಸ್ ಆಫೀಸ್box officeAyushmann Khurranaಬಾಹುಬಲಿ 2Baahubali 2Badhaai Hoಅಯೂಷ್ ಮಾನ್ ಕುರ್ರಾನಾಬದಾಯಿ ಹೋ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


