ಆರ್ಭಟಿಸಿ ಬಂದು ಮಕಾಡೆ ಮಲಗಿತ ಅಮೀರ್ ನಟನೆಯ 'ಥಗ್ಸ್ ಆಫ್ ಹಿಂದೂಸ್ತಾನ್'! ಅಟ್ಟರ್ ಫ್ಲಾಪ್ ಆಯ್ತಾ?
ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಅಮೀರ್ ಖಾನ್ ಅಭಿನಯದ ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಎಂದು...

Published On :
ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಅಮೀರ್ ಖಾನ್ ಅಭಿನಯದ ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಹಾಕಿದ ಬಂಡವಾಳ ಬಂದರೆ ಸಾಕಪ್ಪ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಆರ್ಭಟಿಸಿ ಬಂದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಸೋತಿದೆ. ಮೊದಲ ದಿನದ ಕಲೆಕ್ಷನ್ ನಲ್ಲಿ ಬಾಲಿವುಡ್ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ಬಾಹುಬಲಿ ಚಿತ್ರವನ್ನು ಹಿಂದಿಕ್ಕಿದ್ದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ ಇದೀಗ ಹಾಕಿದ ಬಂಡವಾಳ ವಾಪಸ್ ಬಂದರೆ ಸಾಕು ಎನ್ನುವಂತಾಗಿದೆ ನಿರ್ಮಾಪಕರ ಪರಿಸ್ಥಿತಿ.
ಮೂಲಗಳ ಪ್ರಕಾರ, ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಬಜೆಟ್ 300 ಕೋಟಿ ರುಪಾಯಿ ಎಂದು ಹೇಳಲಾಗುತ್ತಿದೆ. ಇನ್ನು ಚಿತ್ರ ಬಿಡುಗಡೆಯಾಗಿ ಇಂದಿನ ಹನ್ನೆರಡು ದಿನ ಕಳೆದಿದ್ದು ಸದ್ಯ ಚಿತ್ರ ಒಟ್ಟಾರೆ 146 ಕೋಟಿ ರುಪಾಯಿ ಮಾತ್ರ ಗಳಿಸಿದೆ.
ಅಭಿಮಾನಿಗಳಿಂದ ಆಕ್ರೋಶಕ್ಕೆ ಗುರಿಯಾಗಿ ಚಿತ್ರದ ವಿರುದ್ಧ ಟೀಕೆಗಳ ಸುರಿಮಳೆ ಹರಿದಿತ್ತು. ಇದರಿಂದಾಗಿ ಚಿತ್ರ ಬಿಡುಗಡೆಯಾಗಿ ಮೊದಲ ದಿನ ಬಿಟ್ಟರೆ ನಂತರ ದಿನಗಳಲ್ಲಿ ಕಲೆಕ್ಷನ್ ಕುಸಿದಿತ್ತು. ಅಲ್ಲದೆ ಚಿತ್ರಮಂದಿರಗಳ ಸಂಖ್ಯೆಯಲ್ಲೂ ಕೂಡ ಭಾರೀ ಇಳಿಕೆಯಾಗಿದ್ದು ನಿರ್ಮಾಪಕರು ಹಾಕಿದ್ದ ಬಂಡವಾಳಕ್ಕೆ ಅರ್ಧ ಸಹ ಇನ್ನು ಕಲೆಕ್ಷನ್ ಆಗಿಲ್ಲ. ಅಲ್ಲಿಗೆ ಸಾವಿರಾರು ಕೋಟಿ ಕಲೆಕ್ಷನ್ ಮಾಡುತ್ತಿದ್ದ ಅಮಿರ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಟ್ಟರ್ ಫ್ಲಾಪ್ ಆಗುವ ಸೂಚನೆ ಕಾಣಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bollywoodಬಾಲಿವುಡ್Aamir Khanಅಮೀರ್ ಖಾನ್Box Office collectionಬಾಕ್ಸ್ ಆಫೀಸ್ ಕಲೆಕ್ಷನ್Thugs Of Hindostanಥಗ್ಸ್ ಆಫ್ ಹಿಂದೂಸ್ತಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


