ಬಾಲಿವುಡ್

ಗೆಳತಿ ಸೋನಿಯಾ ಕಪೂರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಹಿಮೇಶ್ ರೇಶಮಿಯಾ

ಬಹು ಕಾಲದ ಗೆಳತಿ ಮತ್ತು ನಟಿ ಸೋನಿಯಾ ಕಪೂರ್ ಅವರೊಂದಿಗೆ ಗಾಯಕ ಹಿಮೇಶ್ ರೇಶಮಿಯಾ ಅವರು ಶುಕ್ರವಾರ ರಾತ್ರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ...

ಗೆಳತಿ ಸೋನಿಯಾ ಕಪೂರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಹಿಮೇಶ್ ರೇಶಮಿಯಾ
ಗೆಳತಿ ಸೋನಿಯಾ ಕಪೂರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಹಿಮೇಶ್ ರೇಶಮಿಯಾ
Published On :
ನವದೆಹಲಿ: ಬಹು ಕಾಲದ ಗೆಳತಿ ಮತ್ತು ನಟಿ ಸೋನಿಯಾ ಕಪೂರ್ ಅವರೊಂದಿಗೆ ಗಾಯಕ ಹಿಮೇಶ್ ರೇಶಮಿಯಾ ಅವರು ಶುಕ್ರವಾರ ರಾತ್ರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ರೇಶಮಿಯಾ ಅವರ ನಿವಾಸದಲ್ಲಿಯೇ ಜೋಡಿಗಳು ಹಿಂದು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
ಸೋನಿಯಾ ಜೊತೆಗಿನ ವಿವಾಹ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಹಿರುವ ಹಿಮೇಶ್ ಅವರು, ಸೋನಿಯಾ ಹಾಗೂ ನಾನು ಇಬ್ಬರೂ ಹೊಸ ಜೀವನವನ್ನು ಆರಂಭಿಸಿದ್ದು, ಬಹಳ ಸಂತೋಷವಾಗುತ್ತಿದೆ. ಸೋನಿಯಾ ಅತ್ಯಂತ ಸುಂದರ, ಒಳ್ಳೆಯ ಯುವತಿಯಾಗಿದ್ದು, ಬೇಷರತ್ತಿನಿಂದ ಆಕೆಯನ್ನು ಪ್ರೀತಿಸುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ. 
ಹಿಮೇಶ್ ಅವರಿಗೆ ಇದು ಎರಡನೇ ವಿವಾಹವಾಗಿದ್ದು, ಕೆಲ ದಿನಗಳ ಹಿಂದಷ್ಟೇ ಹಿಮೇಶ್ ಅವರು ಮೊದಲ ಪತ್ನಿ ಕೋಮಲ್ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.