ಹಕ್ಕುಸ್ವಾಮ್ಯ ನಿಯಮದಲ್ಲಿ 60 ವರ್ಷಗಳ ಷರತ್ತು ಅರ್ಥಹೀನ: ಅಮಿತಾಬ್ ಬಚ್ಚನ್
ಲೇಖಕನ ಮರಣದ ನಂತರ 60 ವರ್ಷಗಳವರೆಗೆ ಮೂಲ ಸಾಹಿತ್ಯ ಕಾರ್ಯದ ಉತ್ತರಾಧಿಕಾರಿಗಳಿಗೆ ...

ಮುಂಬೈ: ಲೇಖಕನ ಮರಣದ ನಂತರ 60 ವರ್ಷಗಳವರೆಗೆ ಮೂಲ ಸಾಹಿತ್ಯ ಕಾರ್ಯದ ಉತ್ತರಾಧಿಕಾರಿಗಳಿಗೆ ವಿಶೇಷ ಹಕ್ಕುಗಳನ್ನು ನೀಡುವ ಹಕ್ಕುಸ್ವಾಮ್ಯ ಕಾನೂನಿನ ಷರತ್ತುಗಳನ್ನು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಪ್ರಶ್ನೆ ಮಾಡಿದ್ದಾರೆ.
ಸಾಹಿತ್ಯ, ನಾಟಕ, ಸಂಗೀತ ಮತ್ತು ಇತರ ಕಲಾಕೆಲಸಗಳನ್ನು ಹಕ್ಕುಸ್ವಾಮ್ಯ ಕಾಯ್ದೆ 1957ರ ಪ್ರಕಾರ ಲೆಕ್ಕಹಾಕಲಾಗುತ್ತದೆ. ಆದರೆ ಈ ಕಾಯ್ದೆಯೇ ನಿಷ್ಪ್ರಯೋಜಕ ಎನ್ನುತ್ತಾರೆ.
ಲೇಖಕ ತೀರಿಕೊಂಡ ನಂತರ 60 ವರ್ಷಗಳವರೆಗೆ ಯಾಕೆ ಉತ್ತರಾಧಿಕಾರಿಗೆ ವಿಶೇಷ ಹಕ್ಕುಗಳನ್ನು ನೀಡಬೇಕು, 60 ವರ್ಷ ಎಂದು ನಿರ್ಧರಿಸಿದವರು ಯಾರು? ಇದು ಸರಿಯೇ ಏಕೆ ಅದು 61 ವರ್ಷವಾಗಬಾರದು? ಅಥವಾ ಶಾಶ್ವತ ಅವಧಿಯವರೆಗೆ ಏಕೆ ಇರಬಾರದು ಎಂದು ಬಿಗ್ ಬಿ ಬ್ಲಾಗ್ ನಲ್ಲಿ ಬರೆದಿದ್ದಾರೆ.
ಸೃಜನಾತ್ಮಕ ಹಕ್ಕುಸ್ವಾಮಿ ವಿಚಾರ ಬಂದಾಗ ಉತ್ತರಾಧಿಕಾರಿಗಳು ಸಹಜವಾಗಿ ಹಕ್ಕುಸ್ವಾಮ್ಯ ಹಕ್ಕುಗಳನ್ನು ಹೊಂದುತ್ತಾರೆ. ಆದರೆ 60 ವರ್ಷಗಳು ಕಳೆದ ನಂತರ ಸಹಜ ಉತ್ತರಾಧಿಕಾರಿಗಳು ತೀರಿಕೊಂಡ ನಂತರ ಉತ್ತರಾಧಿಕಾರಿ ಹಕ್ಕುಸ್ವಾಮ್ಯ ಸಾರ್ವಜನಿಕವಾಗುತ್ತದೆ. ಈ ಬುದ್ಧಿವಂತಿಕೆಯ ಕಾನೂನನ್ನು ಮಾಡಿದವರು ಯಾರು, ಯಾವ ವಿಷಯವನ್ನಿಟ್ಟುಕೊಂಡು ಮಾಡಿದ್ದಾರೆ?, 1957ರಲ್ಲಿ ಮಾಡಿರಬೇಕು, ಇದನ್ನು ಕಂಡಾಗ ಸಿಟ್ಟು ಬರುತ್ತದೆ ಎಂದಿದ್ದಾರೆ.
ತಮ್ಮ ತಂದೆ ಹರಿವಂಶ ರಾಯ್ ಬಚ್ಚನ್ ಅವರು ತೀರಿಕೊಂಡ 60 ವರ್ಷಗಳ ನಂತರ ಅವರ ಕೃತಿಗಳನ್ನು ಯಾರು ಬೇಕಾದರೂ ಪಡೆಯಬಹುದು, ಅನುವಾದಿಸಬಹುದು, ಇಡೀ ವಿಶ್ವಕ್ಕೆ ಮುಕ್ತವಾಗಿರುತ್ತದೆ, ಇಂತಹ ಕಾನೂನು ವಾಣಿಜ್ಯ ದೃಷ್ಟಿಯಿಂದ ಉತ್ತಮವಷ್ಟೆ ನಾನು ಇದನ್ನು ವಿರೋಧಿಸುತ್ತೇನೆ, ಒಪ್ಪುವುದಿಲ್ಲ ಎನ್ನುತ್ತಾರೆ 75 ವರ್ಷದ ಅಮಿತಾಬ್ ಬಚ್ಚನ್.
ನನ್ನ ವಂಶಜರಿಂದ ಬಂದ ಸಾಹಿತ್ಯ ಕೃತಿಗಳು ನನ್ನವು, ಅವು ನನಗೊಬ್ಬನಿಗೇ ಸೇರಬೇಕು, ಅವರ ಬರಹ ನನಗೆ ಸೇರಬೇಕಾದ್ದು, ಅದನ್ನು ಸಾರ್ವಜನಿಕಗೊಳಿಸುವುದನ್ನು ನಾನು ಒಪ್ಪುವುದಿಲ್ಲ ಎನ್ನುತ್ತಾರೆ.
ನನ್ನ ಆನುವಂಶಿಕ ಸೌಂದರ್ಯಶಾಸ್ತ್ರವನ್ನು ಅದರ ಸೃಜನಶೀಲತೆಗೆ ನಾನು ತರುತ್ತೇನೆ ... ಅದು ಕೆಟ್ಟದ್ದಾಗಿರಬಹುದು ... ಆದರೆ ಇದು ನನ್ನ ಹಕ್ಕುಸ್ವಾಮ್ಯವಾಗಿದೆ. ಇದರ ಕಾನೂನು ಮಾಡಿದವರು ಯಾರು ಮತ್ತು ಏಕೆ, ವೈಯಕ್ತಿಕ ಆಸ್ತಿ ಸಾರ್ವಜನಿಕ ಆಸ್ತಿಯಾಗಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಇದರ ವಿರುದ್ಧ ನಾನು ಹೋರಾಟ ಮಾಡುತ್ತೇನೆ, ಇಂಗ್ಲಿಷ್ ನ ಖ್ಯಾತ ನಾಟಕಗಾರ ವಿಲಿಯಮ್ ಷೇಕ್ಸ್ ಪಿಯರ್ ಗೆ ಹಕ್ಕುಸ್ವಾಮ್ಯದ ಬಗ್ಗೆ ತಿಳಿದಿರಲಿಲ್ಲವೇಕೆ? ಬೀಥೋವೆನ್ ಅಥವಾ ಮೆಸರ್ಸ್ ಚಾಪಿನ್ ಮತ್ತು ಟ್ಚಾಯ್ಕೋವ್ಸ್ಕಿ, ಅಥವಾ ನಮ್ಮವರೇ ಆದ ರವೀಂದ್ರನಾಥ್ ಠಾಗೂರ್ ಕೂಡ ಇದರ ವಿರುದ್ಧ ಏಕೆ ಹೋರಾಟ ನಡೆಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


