ಅನುಷ್ಕಾ ಶರ್ಮಾ ಅಭಿನಯದ 'ಪರಿ 'ಚಿತ್ರ ಪ್ರದರ್ಶನಕ್ಕೆ ಪಾಕಿಸ್ತಾನದಲ್ಲಿ ನಿರ್ಬಂಧ
ಬಾಲಿವುಡ್ ನಟಿ ಅನುಷ್ಕಾ ಶರ್ಮ ಅಭಿನಯದ ಪರಿ ಚಿತ್ರ ಪ್ರದರ್ಶನವನ್ನು ಪಾಕಿಸ್ತಾನದಲ್ಲಿ ನಿರ್ಬಂಧಿಸಲಾಗಿದೆ

ಇಸ್ಲಾಮಾಬಾದ್ : ಬಾಲಿವುಡ್ ನಟಿ ಅನುಷ್ಕಾ ಶರ್ಮ ಅಭಿನಯದ ಪರಿ ಚಿತ್ರ ಪ್ರದರ್ಶನವನ್ನು ಪಾಕಿಸ್ತಾನದಲ್ಲಿ ನಿರ್ಬಂಧಿಸಲಾಗಿದೆ
ಇಸ್ಲಾಮಿಕ್ ಮೌಲ್ಯ ಮತ್ತು ಮುಸ್ಲಿಂ ಭಾವನೆಗಳಿಗೆ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ಈ ಚಿತ್ರ ಪ್ರದರ್ಶನವನ್ನು ನಿರ್ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.
ಮ್ಯಾಜಿಕ್ ಬಗ್ಗೆ ಮುಸ್ಲಿಂ ಪರಿಕಲ್ಪನೆಯಲ್ಲಿ ವಿವಿಧ ಸಿದ್ಧಾಂತಗಳಿವೆ ಆದರೆ ಪರಿ ಚಿತ್ರದ ಕಥೆ, ಸಂಭಾಷಣೆ, ಇಸ್ಲಾಮ್ ಮೌಲ್ಯಕ್ಕೆ ವಿರುದ್ಧವಾಗಿದೆ.
ಈ ಸಿನಿಮಾದಲ್ಲಿ ತಮ್ಮ ಧರ್ಮಕ್ಕೆ ವಿರುದ್ಧವಾದ ಸಂದೇಶವಿರುವುದಾಗಿ ಪಾಕಿಸ್ತಾನ ಸೆನ್ಸಾರ್ ಬೋರ್ಡ್ ಸದಸ್ಯರು ಹೇಳಿದ್ದಾರೆ.
ಇಸ್ಲಾಂ ಇತಿಹಾಸ ಹಾಗೂ ಸಂಸ್ಕೃತಿಗೆ ವಿರುದ್ಧವಾದ ಯಾವುದೇ ಸಿನಿಮಾವನ್ನು ಪ್ರದರ್ಶಕ್ಕೆ ಅವಕಾಶ ನೀಡುವುದಿಲ್ಲ ಎಂದು
ಪಾಕಿಸ್ತಾನ ಫಿಲಂ ವಿತರಕರ ಸಂಘದ ಅಧ್ಯಕ್ಷ ಚೌದರಿ ಇಜಾಜ್ ಹೇಳಿದ್ದಾರೆ.
ಕಳೆದ ತಿಂಗಳು ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರಕ್ಕೂ ಪ್ರದರ್ಶನವನ್ನು ಪಾಕಿಸ್ತಾನದಲ್ಲಿ ನಿರ್ಬಂಧಿಸಲಾಗಿತ್ತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


