ಬಾಲಿವುಡ್

ಸ್ಯಾನಿಟರಿ ನ್ಯಾಪ್ಕಿನ್ ಗೆ ಜಿಎಸ್ ಟಿ ವಿನಾಯಿತಿ ನೀಡಿದ್ದಕ್ಕೆ ಧನ್ಯವಾದ: ಅಕ್ಷಯ್ ಕುಮಾರ್

ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಸಾಮಾನ್ಯ ಸೇವಾ ತೆರಿಗೆ (ಜಿಎಸ್ ಟಿ) ಯಿಂದ ವಿನಾಯಿತಿ ನೀಡಿರುವುದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಿವುಡ್ ನಟ ಅಕ್ಷಯ್ ಕುಮಾರ್ ...

ಸ್ಯಾನಿಟರಿ ನ್ಯಾಪ್ಕಿನ್ ಗೆ ಜಿಎಸ್ ಟಿ ವಿನಾಯಿತಿ ನೀಡಿದ್ದಕ್ಕೆ ಧನ್ಯವಾದ: ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
Published On :
ಮುಂಬಯಿ; ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಸಾಮಾನ್ಯ ಸೇವಾ ತೆರಿಗೆ (ಜಿಎಸ್ ಟಿ) ಯಿಂದ ವಿನಾಯಿತಿ ನೀಡಿರುವುದಕ್ಕೆ  ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, ಕೆಲವು ದಿನಗಳ ಹಿಂದೆ ಕಣ್ಮೀರು ತರಿಸಿದ್ದ ವಿಷಯ ಮತ್ತೆ ಈಗ ಖುಷಿಗೆ  ಕಾರಣವಾಗಿದೆ, ಮುಟ್ಟಿನ ದಿನಗಳ ಸ್ವಚ್ಛತೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಸ್ಯಾನಿಟರಿ ಪ್ಯಾಡ್ ಗಳಿಗೆ ತೆರಿಗೆ ವಿನಾಯಿತಿ ನೀಡಿರುವುದು ಸಂತೋಷದಾಯಕ ವಿಚಾರ ಎಂದು ಟ್ವೀಟ್ ಮಾಡಿದ್ದಾರೆ, ದೇಶದ ಕೋಟ್ಯಾಂಟತರ ಮಹಿಳೆಯರು ಸದ್ದಿಲ್ಲದೆ ತಮ್ಮ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಸ್ಯಾನಿಟರಿ ಪ್ಯಾಡ್ ಮೇಲೆ ಶೇ.12 ರಷ್ಟು ಜಿಎಸ್ ಟಿ ವಿಧಿಸಲಾಗದಿತ್ತು. ಅದನ್ನು ಸರ್ಕಾರ ಪೂರ್ಣ ಪ್ರಮಾಣದಲ್ಲಿ ಇಳಿಸಿದೆ.
ಪದ್ಮಶ್ರೀ ಪುರಸ್ಕೃತ ಅರುಣಾಚಲಂ ಮುರುಗನಾಥಂ ಅವರು ಗ್ರಾಮೀಣ ಭಾರತದಲ್ಲಿ ಹುಡುಗಿಯರ ಮುಟ್ಟಿನ ದಿನಗಳಲ್ಲಿ ಅಗತ್ಯವಿರುವ ಶುಚಿತ್ವದ ಕುರಿತಾಗಿ ಜಾಗೃತಿ ಮೂಡಿಸುವಲ್ಲಿ ಮತ್ತು ಪಾಕೆಟ್‌ ಫ್ರೆಂಡ್‌ಲೀ ಸ್ಯಾನಿಟರಿ ಪ್ಯಾಡ್‌ಗಳನ್ನು ಉತ್ಪಾದಿಸಿಸುವಲ್ಲಿ ಅದ್ಭುತ ಕ್ರಾಂತಿಕಾರಕ ಕೆಲಸ ಮಾಡಿ ಪ್ರಸಿದ್ಧರಾಗಿರುವರು. ಅವರ ಸಾಮಾಜಿಕ ಕಳಕಳಿಯ ಸಾಹಸಗಾಥೆಯನ್ನು "ಪ್ಯಾಡ್‌-ಮ್ಯಾನ್‌' ಚಿತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.