ನೆಟ್ ಫ್ಲಿಕ್ಸ್ ಹಾರರ್ ಸರಣಿಯ 'ಗೌಲ್' ನಲ್ಲಿ ರಾಧಿಕಾ ಅಪ್ಟೆ, ಮನವ್ ಕೌಲ್
ಜನಪ್ರಿಯ ಅಂತರ್ಜಾಲ ಮನರಂಜನೆ ಸೇವೆ ಒದಗಿಸುವ ನೆಟ್ ಫ್ಲಿಕ್ಸ್ ಇಂಕ್ ಆಗಸ್ಟ್ 24 ರಂದು ರಾಧಿಕಾ ಅಪ್ಟೆ ಹಾಗೂ ಮಾನವ್ ಕೌಲ್ ಅಭಿನಯಿಸಿರುವ ತನ್ನ ಮೊದಲ ಭಾರತೀಯ ಮೂಲದ ಹಾರರ್ ಸರಣಿ ಗೌಲ್ ಬಿಡುಗಡೆ ಮಾಡಲಿದೆ

Published On :
ಮುಂಬೈ: ಜನಪ್ರಿಯ ಅಂತರ್ಜಾಲ ಮನರಂಜನೆ ಸೇವೆ ಒದಗಿಸುವ ನೆಟ್ ಫ್ಲಿಕ್ಸ್ ಇಂಕ್ ಆಗಸ್ಟ್ 24 ರಂದು ರಾಧಿಕಾ ಅಪ್ಟೆ ಹಾಗೂ ಮಾನವ್ ಕೌಲ್ ಅಭಿನಯಿಸಿರುವ ತನ್ನ ಮೊದಲ ಭಾರತೀಯ ಮೂಲದ ಹಾರರ್ ಸರಣಿ ಗೌಲ್ ಬಿಡುಗಡೆ ಮಾಡಲಿದೆ.
ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಎಂಟರ್ ಟೈನ್ ಮೆಂಟ್ ಪ್ಯಾಂಟೊಮ್ ಫಿಲಮ್ಸ್, ಇವಾನ್ ಹೊ ಹಾಗೂ ಬ್ರೂಮ್ ಹೌಸ್ ಪಾಲುದಾರಿಕೆಯಲ್ಲಿ ಗೌಲ್ ನಿರ್ಮಾಣಗೊಂಡಿದೆ. ಥ್ಲಿಲ್ಲಿಂಗ್ ಹಾರರ್ ಸರಣಿಯಾಗಿದ್ದು, ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ರಾಧಿಕಾ ಆಪ್ಟೆ ಉತ್ತಮ ಪ್ರದರ್ಶನ ನೀಡಿದ್ದು, ಗುಣಮಟ್ಟದ ಚಿತ್ರಕಥೆ ಹೊಂದಿರುವ ಈ ಚಿತ್ರ ಭಾರತ ಹಾಗೂ ವಿದೇಶಿಯ ವೀಕ್ಷಕರನ್ನು ಆಕರ್ಷಿಸಲಿದೆ ಎಂದು ಅಂತಾರಾಷ್ಟ್ರೀಯ ಮೂಲಕ ನಿರ್ದೇಶಕ ಸಿಮ್ರಾನ್ ಸೆಥಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸರಣಿಯ ಟ್ರೈಲರ್ ಮಂಗಳವಾರ ಬಿಡುಗಡೆಯಾಗಿದ್ದು, ಭಾರತ ಸೇರಿದಂತೆ 190 ರಾಷ್ಟ್ರಗಳ 125 ಮಿಲಿಯನ್ ನೆಟ್ ಪ್ಲಿಕ್ಸ್ ಸದಸ್ಯರು ಒಂದೇ ಸಮಯದಲ್ಲಿ ಎಲ್ಲಾ ಮೂರು ಎಪಿಸೋಡುಗಳನ್ನು ವೀಕ್ಷಿಸಬಹುದಾಗಿದೆ.
ನೆಟ್ ಪ್ಲಿಕ್ಸ್ ಜೊತೆಗೆ ಕೆಲಸ ಮಾಡಿದದ್ದು ತುಂಭಾ ಅನುಭವಾಗಿದೆ ಬ್ಲೂಮ್ ಆಫ್ ಬ್ಲೂಮ್ ಹೌಸ್ ನ ಜಾಸನ್ ಹೇಳಿದ್ದಾರೆ. ಗೌಲ್ ಸೀಟಿನ ಅಂಚಿನಲ್ಲಿಯೂ ಭಯಾನಕತೆ ಹುಟ್ಟಿಸುತ್ತದೆ ಎಂದು ಪ್ಯಾಂಟಮ್ ಫಿಲ್ಸಂನ ವಿಕ್ರಾಮಾದಿತ್ಯ ಮೊಟ್ವಾನೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


