ಶ್ರೀದೇವಿ ನಿಧನ; ಮಾಧ್ಯಮಗಳ ವಿರುದ್ಧ ನಟ ರಿಷಿ ಕಪೂರ್ ಆಕ್ರೋಶ, ಟ್ವೀಟ್ ವೈರಲ್!
ನಟಿ ಶ್ರೀದೇವಿ ನಿಧನ ಸಂಬಂಧ ಮಾಧ್ಯಮಗಳ ವಿರುದ್ಧ ನಟ ರಿಷಿ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದು, ವ್ಯಕ್ತಿತ್ವ ಮಾಯವಾಗಿ ದೇಹವಾಗಿ ಹೋಯಿತೇ ಎಂದು ಟ್ವೀಟ್ ಮಾಡಿದ್ದಾರೆ.

Published On :
ಮುಂಬೈ: ನಟಿ ಶ್ರೀದೇವಿ ನಿಧನ ಸಂಬಂಧ ಮಾಧ್ಯಮಗಳ ವಿರುದ್ಧ ನಟ ರಿಷಿ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದು, ವ್ಯಕ್ತಿತ್ವ ಮಾಯವಾಗಿ ದೇಹವಾಗಿ ಹೋಯಿತೇ ಎಂದು ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ಮೆಗಾ ಹಿರೋಯಿನ್ ಶ್ರೀದೇವಿ ನಿಧನಕ್ಕೆ ಸಂತಾಪ ಸೂಚಿಸಿರುವ ನಟ ರಿಷಿ ಕಪೂರ್, ಶ್ರೀದೇವಿ ನಿಧನದ ಸುದ್ದಿ ಕೇಳಿ ನಿಜಕ್ಕೂ ಆಘಾತವಾಯಿತು. ಆದರೆ ಮಾಧ್ಯಮಗಳಲ್ಲಿನ ವರದಿಗಳನ್ನು ಕೇಳಿ ನನಗೆ ನಿಜಕ್ಕೂ ನೋವಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಶ್ರೀದೇವಿ ಕೇವಲ ಪಾರ್ಥೀವ ಶರೀರವಾಗಿ ಬದಲಾಗಿ ಹೋದಳೇ..? ಎಲ್ಲ ಮಾಧ್ಯಮಗಳೂ ಪಾರ್ಥೀವ ಶರೀರವನ್ನು ಮುಂಬೈಗೆ ಕರೆತರಲಾಗುತ್ತದೆ ಎಂದು ವರದಿ ಬಿತ್ತರಿಸುತ್ತಿವೆ. ಆಕೆಯ ಸಾಧನೆ, ವ್ಯಕ್ತಿತ್ವ ಎಲ್ಲವೂ ಆಕೆಯ ಸಾವಿನೊಂದಿಗೆ ಬದಲಾಗಿ ಕೇವಲ ದೇಹವಾಗಿ ಪರಿವರ್ತನೆಯಾಯಿತೇ ಎಂದು ರಿಷಿಕಪೂರ್ ಟ್ವೀಟ್ ಮಾಡಿದ್ದಾರೆ.
ಇನ್ನು ಇದೇ ವೇಳೆ ಸಂಬಂಧಿ ಬೋನಿ ಕಪೂರ್ ಹಾಗೂ ಅವರ ಇಬ್ಬರು ಮಕ್ಕಳಿಗೆ ರಿಷಿಕಪೂರ್ ಸಾಂತ್ವನ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈTwitterಟ್ವಿಟರ್Bollywoodಬಾಲಿವುಡ್Heart AttackಹೃದಯಾಘಾತSrideviಶ್ರೀದೇವಿRishi Kapoorರಿಷಿ ಕಪೂರ್Boney Kapoorಬೋನಿ ಕಪೂರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


