ಸಾಮಾಜಿಕ ತಾಣದಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರನ್ನು ಹಿಂದಿಕ್ಕಿದ ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್
ತನ್ನ ವಿಂಕಿಂಗ್ ಹಾಗೂ ಕಣ್ ಸನ್ನೆಯ ಮೂಲಕ ನ್ಯಾಷನಲ್ ಸೆನ್ಸೇಷನ್ ಆದ ಮಲೆಯಾಳಂ ನಟಿ ಪ್ರಿಯಾ ವಾರಿಯರ್ ಸಾಮಾಜಿಕ ತಾಣಗಳಲ್ಲಿ ದಾಖಲೆ ಸಂಖ್ಯೆಯ ಬೆಂಬಲಿಗರನ್ನು ಪಡೆದಿದ್ದಾರೆ.

Published On :
ನವದೆಹಲಿ: ತನ್ನ ವಿಂಕಿಂಗ್ ಹಾಗೂ ಕಣ್ ಸನ್ನೆಯ ಮೂಲಕ ನ್ಯಾಷನಲ್ ಸೆನ್ಸೇಷನ್ ಆದ ಮಲೆಯಾಳಂ ನಟಿ ಪ್ರಿಯಾ ವಾರಿಯರ್ ಸಾಮಾಜಿಕ ತಾಣಗಳಲ್ಲಿ ದಾಖಲೆ ಸಂಖ್ಯೆಯ ಬೆಂಬಲಿಗರನ್ನು ಪಡೆದಿದ್ದಾರೆ. ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ವಿಶ್ವ ಸುಂಡರಿ ಮಾನುಷಿ ಚಿಲ್ಲರ್ ಗಿಂತಲೂ ಹೆಚ್ಚಿನ ಫಾಲೋವರ್ಸ್ ಹೊಂದುವ ಮುಖೇನ ನೂತನ ದಾಖಲೆ ಬರೆದಿದ್ದಾರೆ.
ಪ್ರಿಯಾ 37 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ್ದು ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರನ್ನ ಹಿಂದಿಕ್ಕಿದ್ದಾರೆ. ಮಾನುಷಿ ಖಾತೆಗೆ 28 ಲಕ್ಷ ಪಾಲೋವರ್ಸ್ ಇದ್ದಾರೆ. ಎಂದರೆ ಪ್ರಿಯಾ ಅವರಿಗೆ ಚಿಲ್ಲಎರ್ ಗಿಂತಲೂ 9 ಲಕ್ಷ ಹೆಚ್ಚು ಫಾಲೋವರ್ಸ್ ಇದ್ದಾರೆ.
2017ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಜಯಿಸಿದ್ದ ಮಾನುಷಿ ಚಿಲ್ಲರ್ 17 ವರ್ಷದ ಬಳಿಕ ಭಾರತದವರೊಬ್ಬರು ವಿಶ್ವ ಸುಂದರಿಯಾಗಿ ಹೊರಹೊಮ್ಮುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಆದರೆ 'ಒರು ಆಡಾರ್ ಲವ್’ ಚಿತ್ರದ `ಮಾಣಿಕ್ಯಾ ಮಲರಾಯಾ ಪೂವಿ’ ಹಾಡಿನ ಮೂಲಕ ಪ್ರಸಿದ್ದಿ ಪಡೆದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇನ್ ಸ್ಟಾಗ್ರಾಮ್ ಖಾತೆಯನ್ನು ಒಂದು ದಿನದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಫಾಲೋ ಮಾಡುವ ಮುಖೇನ ಒಂದು ದಿನದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಪಡೆದ ಜಗತ್ತಿನ ಮೂರನೇ ಸೆಲೆಬ್ರಿಟಿ ಎನಿಸಿಕೊಂಡರು. ಇದಕ್ಕೂ ಹಿಂದೆ ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲೀ ಜೆನ್ನರ್ ಮತ್ತು ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಈ ಸಾಧನೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
miss worldವಿಶ್ವ ಸುಂದರಿOru Adaar LovePriya Prakash Varrierಪ್ರಿಯಾ ಪ್ರಕಾಶ್ ವಾರಿಯರ್ಒರು ಅಡಾರ್ ಲವ್Manushi Chillarಮಾನುಷಿ ಚಿಲ್ಲ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


