ಅನುಪಮ್ ಖೇರ್ ನಂತರ ಅಭಿಷೇಕ್ ಬಚ್ಚನ್ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿದ ದುಷ್ಕರ್ಮಿಗಳು
ನಿನ್ನೆ ತಾನೆ ಬಾಲಿವುಡ್ ನಟ ಅನುಪಮ್ ಖೇರ್ ಟ್ವಿಟ್ಟರ್ ಖಾತೆಯನ್ನು ಪಾಕಿಸ್ತಾನ ಬೆಂಬಲಿತ ಟರ್ಕಿ ಸೈಬರ್ ಸೇನೆ ಹ್ಯಾಕ್ ಮಾಡಿತ್ತು ಇದೇ ರೀತಿ ಇಂದು........

Published On :
ನವದೆಹಲಿ: ನಿನ್ನೆ ತಾನೆ ಬಾಲಿವುಡ್ ನಟ ಅನುಪಮ್ ಖೇರ್ ಟ್ವಿಟ್ಟರ್ ಖಾತೆಯನ್ನು ಪಾಕಿಸ್ತಾನ ಬೆಂಬಲಿತ ಟರ್ಕಿ ಸೈಬರ್ ಸೇನೆ ಹ್ಯಾಕ್ ಮಾಡಿತ್ತು ಇದೇ ರೀತಿ ಇಂದು ಇನ್ನೊಬ್ಬ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಟ್ವಿಟ್ಟರ್ ಖಾತೆಯನ್ನೂ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ.
"ಭಾರತದ ಅತ್ಯಂತ ಪ್ರಸಿದ್ಧ ನಟರಾದ ಅಭಿಷೇಕ್ ಬಚ್ಚನ್ ಟ್ವಿಟ್ಟರ್ ಖಾತೆ ನಮ್ಮಿಂದ ಹ್ಯಾಕ್ ಮಾಡಲ್ಪಟ್ಟಿದೆ ನಾವು ಡಿಎಂ ಪತ್ರವ್ಯವಹಾರ ಮತ್ತು ಮಾಹಿತಿ ಪಡೆದುಕೊಂಡಿದ್ದೇವೆ. ಟ್ವಿಟ್ಟರ್ ಸಂಸ್ಥೆ ನಮ್ಮ ಖಾತೆಗಳನ್ನು ನಿಷ್ಕ್ರಿಯಗೊಳಿಸುವವರೆಗೆ ನಮ್ಮ ಹ್ಯಾಕಿಂಗ್ ದಾಳಿಯು ಮುಂದುವರಿಯುತ್ತದೆ, " ಹ್ಯಾಕರ್ಸ್ ಗಳು ಟ್ವಿಟ್ಟರ್ ಸಂಸ್ಥೆಗೆ ಅಧಿಕೃತ ಪಂಥಾಹ್ವಾನ ನೀಡಿದ್ದಾರೆ.
ನಿನ್ನೆ (ಮಂಗಳವಾರ) ಹಿಂದಿ ಚಿತ್ರನಟ ಅನುಪಮ್ ಖೇರ್, ರಾಜ್ಯಸಭೆ ಸದಸ್ಯರಾದ ಸ್ವಪನ್ ದಾಸುಪ್ತಾ,, ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರುಗಳ ಟ್ವಿಟ್ಟರ್ ಕಾತೆಗಳು ಹ್ಯಾಕ್ ಆಗಿದ್ದವು.
"ನನ್ನ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ, ನಾನೀಗಾಗಲೇ ಟ್ವಿಟ್ಟರ್ ನೊಡನೆ ಈ ಕುರಿತು ಮಾತನಾಡಿದ್ದೇನೆ" ಎಂದು ನಟ ಅನುಪಮ್ ಖೇರ್ ನಿನ್ನೆ ಹೇಳಿಕೆಯಲ್ಲಿ ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Twitterಟ್ವಿಟರ್Abhishek Bachchanಅಭಿಷೇಕ್ ಬಚ್ಚನ್Kiran Bediಕಿರಣ್ ಬೇಡಿAnupam Kherಅನುಪಮ್ ಖೇರ್Swapan Dasuptaಸ್ವಪನ್ ದಾಸುಪ್ತಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


