ಬಾಲಿವುಡ್

ಯುಎಸ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಳಿಕ ಮುಂಬೈಗೆ ಮರಳಲು ಸಜ್ಜಾದ ಸೋನಾಲಿ ಬೇಂದ್ರೆ

ಕ್ಯಾನ್ಸರ್ ಗಾಗಿ ಚಿಕಿತ್ಸೆ ಹೊಂದುವುದಕ್ಕೆ ನ್ಯೂಯಾರ್ಕ್ ಗೆ ತೆರಳಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಐದು ತಿಂಗಳ ಬಳಿಕ ತಮ್ಮ ತವರು ಮುಂಬೈಗೆ ಮರಳುತ್ತಿದ್ದಾರೆ.

ಯುಎಸ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಳಿಕ ಮುಂಬೈಗೆ ಮರಳಲು ಸಜ್ಜಾದ ಸೋನಾಲಿ ಬೇಂದ್ರೆ
ಸೋನಾಲಿ ಬೇಂದ್ರೆ
Published On :
ಮುಂಬೈ: ಕ್ಯಾನ್ಸರ್ ಗಾಗಿ ಚಿಕಿತ್ಸೆ ಹೊಂದುವುದಕ್ಕೆ ನ್ಯೂಯಾರ್ಕ್ ಗೆ ತೆರಳಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಐದು ತಿಂಗಳ ಬಳಿಕ ತಮ್ಮ ತವರು ಮುಂಬೈಗೆ ಮರಳುತ್ತಿದ್ದಾರೆ.
ಜುಲೈ ಮೊದಲ ವಾರದಲ್ಲಿ ನಟಿ ತಮಗೆ ತೀವ್ರ ಸ್ತರದ ಕ್ಯಾನ್ಸರ್ ರೋಗವಿದ್ದು ಇದರ ಚಿಕಿತ್ಸೆಗಾಗಿ ನ್ಯೂಯಾರ್ಕ್ ಗೆ ತೆರಳುವುದಾಗಿ ಹೇಳಿದ್ದರು.
"ತಾನು ಸಂತಸದಿಂದ ಮತ್ತೆ ಮುಂಬೈಗೆ ಮರಳುತ್ತಿದ್ದೇನೆ" ಎಂದು ಸೋನಾಲಿ ಸಾಮಾಜಿಕ ತಾಣದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ "ಹೋರಾಟವು ಇನ್ನೂ ಮುಗಿದಿಲ್ಲ"  ಎಂದೂ ಸಹ ಆಕೆ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಂಚಿಕೊಂಡಿರುವ ನಟಿ "ದೂರಾವಾದಾಗ ಹೃದಯ ಭಾರವಾಗುತ್ತದೆ ಎನ್ನುವುದು ನಿಜ ಆದರೆ ಆ ದೂರವು ನಿಮಗೇನನ್ನು ಕಲಿಸುತ್ತದೋ ಅದನ್ನು ಕೀಳಾಗಿ ಕಾಣುವಂತಿಲ್ಲ. ಮನೆಯಿಂದ ದೂರದ ನ್ಯೂಯಾರ್ಕ್ ನಲ್ಲಿ ನಾನಿದ್ದಾಗ ನಾನು ಅನೇಕ ಕಥೆಗಳನ್ನು ಕೇಳಿದ್ದೇನೆ, ಅವೆಲ್ಲವೂ ತಮ್ಮ ಅದ್ಯಾಯವನ್ನು ವಿಭಿನ್ನ ರೀತಿಯಲ್ಲಿ ಬರೆಯಲು ಪ್ರಯತ್ನಿಸುತ್ತದೆ. ಪ್ರತಿಯೊಬ್ಬರು ಇದನ್ನು ಮಾಡಲು ಪ್ರಯತ್ನಿಸುತ್ತಾರಾದರೂ ಬಿಟ್ಟುಕೊಡುವುದಿಲ್ಲ. ಪ್ರತಿಯೊಬ್ಬರಿಗೆ ಇಂತಹಾ ಒಂದಲ್ಲ ಒಂದು ದಿನ ಬರುತ್ತದೆ."
ತಾನು ತನ್ನ ತವರಿಗೆ ಮರಳುವ ಹಾದಿಯಲ್ಲಿದ್ದೇನೆ ಎಂದು ಹೇಳುವ ಸೋನಾಲಿ "ಅಲ್ಲಿ ನಾಳೆಯು ಹೊಸ ಬೆಳಕಿನೊಡನೆ ಪ್ರಾರಂಭವಾಗಲಿದೆ. ಇದನ್ನು ಸ್ವೀಕರಿಸಲು ನಾನು ಎಂದಿಗೂ ಹಿಂಜರಿಯುವುದಿಲ್ಲ.ಸೂರ್ಯೋದಯಕ್ಕೆ ನಾನು ನನ್ನನ್ನೇ ಒಡ್ಡಿಕೊಳ್ಳುತ್ತೇನೆ, ಜೀವನದ ಹೊಸ ಅವಿಷ್ಕಾರಕ್ಕಾಗಿ ತಯಾರಾಗುತ್ತೇನೆ.ಕ್ರಿಸ್ ಮಾರ್ಟಿನ್ಅವರ ಮಾತಿನಂತೆ ಕನಸನ್ನು ನನಸಾಗಿಸಿಕೊಳ್ಳುವ ಹಾದಿಯಲ್ಲಿ ಮುಂದುವರಿಯುತ್ತಾ ಹೋದಂತೆ ಹಲವು ಒತ್ತಡ, ಭಾರಗಳ ಸಂದಿಯಲ್ಲಿ ಸಿಕ್ಕು ನಾವು ವಜ್ರದಂತೆ ಆಕಾರ ಪಡೆಯುತ್ತಾ ಹೋಗುತ್ತೇವೆ" ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.