ಶೋಲೆ ಖ್ಯಾತಿಯ ಬಾಲಿವುಡ್ ನಟ ರಾಜ್ ಕಿಶೋರ್ ನಿಧನ
ಶೋಲೆ ಚಿತ್ರದಲ್ಲಿನ ಖೈದಿಗಳಲ್ಲಿ ಒಬ್ಬರಾಗಿದ್ದ ನಟ ರಾಜ್ ಕಿಶೋರ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮುಂಬೈ : ಶೋಲೆ ಚಿತ್ರದಲ್ಲಿನ ಖೈದಿಗಳಲ್ಲಿ ಒಬ್ಬರಾಗಿದ್ದ ನಟ ರಾಜ್ ಕಿಶೋರ್ ನಿಧನ ಹೊಂದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಕೆಲ ದಿನಗಳಿಂದಲೂ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರಾಜ್ ಕಿಶೋರ್ ಕಳೆದ ರಾತ್ರಿ ರಾತ್ರಿ ಹೃದಯಾಘಾತವಾಗಿ ಗುರಗಾಂವ್ ನಲ್ಲಿ ನ ಅವರ ನಿವಾಸದಲ್ಲಿ ಮೃತಪಟ್ಟರು ಎಂಬುದಾಗಿ ಸಿನಿಮಾ ಮತ್ತು ಟಿವಿ ಕಲಾವಿದರ ಸಂಘದ ಸದಸ್ಯ ನೂಪುರ್ ಅಲಂಕರ್ ತಿಳಿಸಿದ್ದಾರೆ.
ಪತ್ನಿ ಹಾಗೂ ಒಬ್ಬ ಮಗನನನ್ನು ರಾಜ್ ಕಿಶೋರ್ ಅಗಲಿದ್ದು, ಸ್ಮಶಾನದಲ್ಲಿ ಇಂದು ಬೆಳಿಗ್ಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಶೋಲೆ ಮಾತ್ರವಲ್ಲದೆ, ಪಡೊಸನ್ ( 1968) ದೀವಾರ್ (1975) ರಾಮ್ ಔರ್ ಶ್ಯಾಮ್ ( 1967)ಹರೇ ರಾಮ ಹರೇ ಕೃಷ್ಣ ( 1971) ಅಸಮಾನ್ (1984) ಬಾಂಬೆ ಟು ಗೋವಾ ( 1972) ಕರಣ್ ಅರ್ಜುನ್ (1995) ಸೇರಿದಂತೆ ಹಲವು ಚಿತ್ರಗಳಲ್ಲಿ ರಾಜ್ ಕಿಶೋರ್ ಅಭಿನಯಿಸಿದ್ದರು.
ರಾಜ್ ಕಿಶೋರ್ ನಿಧನಕ್ಕೆ ಹಲವು ಗಣ್ಯರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


