ಬಾಲಿವುಡ್

೬೦ನೇ ಸ್ಯಾನ್ ಫ್ರಾನ್ಸಿಸ್ಕೊ ಸಿನಿಮೋತ್ಸವದಲ್ಲಿ ಶಾರುಖ್ ಖಾನ್ ಅವರಿಗೆ ಗೌರವ

೬೦ ನೇ ಸ್ಯಾನ್ ಫ್ರಾನ್ಸಿಸ್ಕೊ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ, ಏಪ್ರಿಲ್ ೧೪ ರಂದು ಗೌರವ ಸ್ವೀಕರಿಸುತ್ತಿರವುದಕ್ಕೆ ಉತ್ಸುಕರಾಗಿರುವುದಾಗಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್

೬೦ನೇ ಸ್ಯಾನ್ ಫ್ರಾನ್ಸಿಸ್ಕೊ ಸಿನಿಮೋತ್ಸವದಲ್ಲಿ ಶಾರುಖ್ ಖಾನ್ ಅವರಿಗೆ ಗೌರವ
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್
Published On :
ನವದೆಹಲಿ: ೬೦ ನೇ ಸ್ಯಾನ್ ಫ್ರಾನ್ಸಿಸ್ಕೊ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ, ಏಪ್ರಿಲ್ ೧೪ ರಂದು ಗೌರವ ಸ್ವೀಕರಿಸುತ್ತಿರವುದಕ್ಕೆ ಉತ್ಸುಕರಾಗಿರುವುದಾಗಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹೇಳಿದ್ದಾರೆ. 
ಈ ಖುಷಿಯ ವಿಷವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ೫೧ ವರ್ಷದ ನಟ "೬೦ ನೇ ಸ್ಯಾನ್ ಫ್ರಾನ್ಸಿಸ್ಕೊ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗವಹಿಸುತ್ತಿರುವುದೇ ಗೌರವ. ಗೆಳೆಯ @ಬ್ರೆಟ್ ರ್ಯಾಂಟರ್ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ. ಮತ್ತು ಸ್ಯಾನ್ ಫ್ರಾನ್ಸಿಸ್ಕೊ ನೆನಪುಗಳಿಗೂ" ಎಂದು ಅವರು ಬರೆದಿದ್ದರೆ. 
ಈ ಉತ್ಸವಕ್ಕೆ "ವಿಶ್ವದ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾದ" ಶಾರುಖ್ ಖಾನ್ ಅವರನ್ನು ಆಹ್ವಾನಿಸುವುದಕ್ಕೆ ಗೌರವ ಎಂದು ಈ ಉತ್ಸವದ ಆಯೋಜಕರು ಹೇಳಿದ್ದಾರೆ. 
ಜಾನ್ ರಿಡ್ಲಿ, ಗಾರ್ಡನ್ ಗುಂಡ್, ಎಥಾನ್ ಹಾವ್ಕ್ ಮತ್ತು ಜೇಮ್ಸ್ ಐವರಿ ಇವರುಗಳ ಜೊತೆಗೆ ಸ್ಯಾನ್ ಫ್ರಾನ್ಸಿಸ್ಕೊ ಸಿನಿಮೋತ್ಸವದಲ್ಲಿ ಶಾರುಖ್ ಖಾನ್ ಗೌರವ ಸ್ವೀಕರಿಸಲಿದ್ದಾರೆ. 
ಏಪ್ರಿಲ್ ೫-೧೯ ರವರೆಗೆ ನಡೆಯುವ ಉತ್ಸವದಲ್ಲಿ ೨೦೦ ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿದ್ದು ಹಲವು ಕಾರ್ಯಕ್ರಮಗಳು ಕೂಡ ನಡೆಯಲಿವೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.