ನಮಸ್ತೆ ಇಂಗ್ಲೆಂಡ್ ಸಿನಿಮಾದಲ್ಲಿ ಅರ್ಜುನ್ ಕಪೂರ್
2007 ರಲ್ಲಿ ತೆರೆ ಕಂಡಿದ್ದ ನಮಸ್ತೆ ಲಂಡನ್ ಚಿತ್ರದ ಸೀಕ್ವೆಲ್ ನ್ನು ಮಾಡುವುದಾಗಿ ವಿಫುಲ್ ಅಮೃತ್ ಲಾಲ್ ಷಾ ಕಳೆದ ವರ್ಷ ಘೋಷಿಸಿದ್ದರು. ಈ ಚಿತ್ರದ ಕುರಿತು ಅಪ್ ಡೇಟ್ ದೊರೆತಿದ್ದು...

Published On :
2007 ರಲ್ಲಿ ತೆರೆ ಕಂಡಿದ್ದ ನಮಸ್ತೆ ಲಂಡನ್ ಚಿತ್ರದ ಸೀಕ್ವೆಲ್ ನ್ನು ಮಾಡುವುದಾಗಿ ವಿಫುಲ್ ಅಮೃತ್ ಲಾಲ್ ಷಾ ಕಳೆದ ವರ್ಷ ಘೋಷಿಸಿದ್ದರು. ಈ ಚಿತ್ರದ ಕುರಿತು ಅಪ್ ಡೇಟ್ ದೊರೆತಿದ್ದು, ಇತ್ತೀಚಿನ ವರದಿ ಪ್ರಕಾರ ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ನಟಿಸಿದ್ದ ನಮಸ್ತೆ ಲಂಡನ್ ಚಿತ್ರದ ಸೀಕ್ವೆಲ್ ನಲ್ಲಿ ಅರ್ಜುನ್ ಕಪೂರ್ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದಿನ ಯೋಜನೆಯ ಪ್ರಕಾರ ಸೀಕ್ವೆಲ್ ಚಿತ್ರದಲ್ಲೂ ಅಕ್ಷಯ್ ಕುಮಾರ್ ನಟಿಸಬೇಕಿತ್ತು. ಆದರೆ ಅರ್ಜುನ್ ಕಪೂರ್ ಗೆ ಅವಕಾಶ ನೀಡಲಾಗಿದೆ. ಅಕ್ಷಯ್ ಕುಮಾರ್ ಅವರು ಬೇರೆ ಸಿನಿಮಾದಲ್ಲಿ ಕಾರ್ಯನಿರತರಾಗಿರುವುದರಿಂದ ಬೇರೆ ನಟರಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಅರ್ಜುನ್ ಕಪೂರ್ ನಟಿಸಲಿದ್ದು ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಚಿತ್ರತಂಡದ ಮೂಲಗಳಿಂದ ತಿಳಿದುಬಂದಿದೆ.
ನಮಸ್ತೆ ಲಂಡನ್ ಚಿತ್ರದ ಸೀಕ್ವೆಲ್ ಮಾಡುವುದರ ಬಗ್ಗೆ ವಿಫುಲ್ ಬಹಳ ಹಿಂದೆಯೇ ಘೋಷಿಸಿದ್ದರಾದರೂ ಕಾರಣಾಂತರಗಳಿಂದ ಚಿತ್ರೀಕರಣ ಪ್ರಾರಂಭವಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


