ಐಎಫ್ಎಫ್ಎಂ ಅತ್ಯುತ್ತಮ ನಟ ಪ್ರಶಸ್ತಿಗಾಗಿ ಅಮಿತಾಭ್, ಆಮೀರ್ ಮಧ್ಯ ತೀವ್ರ ಸ್ಪರ್ಧೆ
ಇದೇ ಮೊದಲ ಬಾರಿಗೆ ‘ಥಗ್ಸ್ ಆಫ್ ಹಿಂದೂಸ್ತಾನ್’ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವ ಬಾಲಿವುಡ್ ಸೂಪರ್ ಸ್ಟಾರ್ ಗಳಾದ ....

Published On :
ನವದೆಹಲಿ: ಇದೇ ಮೊದಲ ಬಾರಿಗೆ ‘ಥಗ್ಸ್ ಆಫ್ ಹಿಂದೂಸ್ತಾನ್’ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವ ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಮಿತಾಭ್ ಬಚ್ಚನ್ ಹಾಗೂ ಆಮೀರ್ ಖಾನ್ ಅವರು 2017ನೇ ಸಾಲಿನ ಮೆಲ್ಬೋರ್ನ್ ಭಾರತೀಯ ಚಲನ ಚಿತ್ರೋತ್ಸವದ(ಐಎಫ್ಎಫ್ಎಂ) ಅತ್ಯುತ್ತಮ ನಟ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.
ಮಂಗಳವಾರ ಪ್ರಕಟಣೆಯ ಮೂಲಕ ಅತ್ಯುತ್ತಮ ನಟ ಪ್ರಶಸ್ತಿಯ ನಾಮಿನಿಗಳನ್ನು ಘೋಷಿಸಲಾಗಿದೆ.
ಪಿಂಕ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅಮಿತಾಭ್ ಬಚ್ಚನ್ ಹಾಗೂ ಬ್ಲಾಕ್ ಬಸ್ಟರ್ ದಂಗಲ್ ಚಿತ್ರದಲ್ಲಿನ ಅಭಿನಯಕ್ಕಾಗಿ ಆಮೀರ್ ಖಾನ್ ಅವರು ನಾಮಿನೇಟ್ ಆಗಿದ್ದಾರೆ. ಅಲ್ಲದೆ ಟ್ರಾಪಡ್ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜಕುಮಾರ್ ರಾವ್, ಎಂಎಸ್ ಧೋನಿ ಚಿತ್ರದಲ್ಲಿನ ಅಭಿನಯಕ್ಕಾಗಿ ಸುಶಾಂತ್ ಸಿಂಗ್ ರಜಪುತ್ ಹಾಗೂ ಮುಕ್ತಿ ಭವನ್ ಚಿತ್ರದ ಅಭಿನಯಕ್ಕಾಗಿ ಲಲಿತ್ ಭೆಲ್ ನಾಮಿನೇಟ್ ಆಗಿದ್ದಾರೆ.
ಇನ್ನು ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ಡೀಯರ್ ಜಿಂದಗಿ ಚಿತ್ರದಲ್ಲಿನ ಅಭಿನಯಕ್ಕಾಗಿ ಆಲಿಯಾ ಭಟ್, ಕಹಾನಿ 2 ಚಿತ್ರದಲ್ಲಿನ ಅಭಿನಯಕ್ಕಾಗಿ ವಿದ್ಯಾ ಬಾಲನ್, ಡಾ.ರಖ್ಮಾಬಾಯಿ ಚಿತ್ರದ ಅಭಿನಯಕ್ಕಾಗಿ ತನಿಷ್ಠಾ ಚಟರ್ಜಿ, ಲಿಫ್ಟಿಂಕ್ ಅಂಡರ್ ಮೈ ಬುರ್ಖಾ ಚಿತ್ರದಲ್ಲಿನ ಅಭಿನಯಕ್ಕಾಗಿ ಕೊಂಕಣ ಸೇನ್ ಹಾಗೂ ಪಿನ್ನೆಯಮ್ ಚಿತ್ರದಲ್ಲಿನ ಅಭಿನಯಕ್ಕಾಗಿ ಕಾವ್ಯಾ ಮಾಧವನ್ ಅವರು ನಾಮಿನೇಟ್ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Amitabh BachchanAamir Khanಆಮೀರ್ ಖಾನ್ಅಮಿತಾಭ್ ಬಚ್ಚನ್Best Actor awardIFFM 2017ಅತ್ಯುತ್ತಮ ನಟ ಪ್ರಶಸ್ತಿಐಎಫ್ಎಫ್ ಎಂ 2017
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


