ಬಾಲಿವುಡ್

ರಾಯೀಸ್ ಪ್ರಚಾರದ ವೇಳೆ ಅಭಿಮಾನಿ ಸಾವು: ಸಂತಾಪ ಸೂಚಿಸಿದ ಶಾರುಖ್ ಖಾನ್

ರಾಯೀಸ್‌ ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರು ಆಗಮಿಸಿದ್ದ ವೇಳೆ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಓರ್ವ ಅಭಿಮಾನಿ ...

ರಾಯೀಸ್ ಪ್ರಚಾರದ ವೇಳೆ ಅಭಿಮಾನಿ ಸಾವು: ಸಂತಾಪ ಸೂಚಿಸಿದ ಶಾರುಖ್ ಖಾನ್
ಶಾರುಖ್ ಖಾನ್
Published On :

ವಡೋದರಾ: ರಾಯೀಸ್‌ ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರು ಆಗಮಿಸಿದ್ದ ವೇಳೆ  ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಓರ್ವ ಅಭಿಮಾನಿ ಸಾವನ್ನಪ್ಪಿ, ಹಲವರು ಗಾಯಗೊಂಡ ದುರ್ಘ‌ಟನೆ ಸಂಭವಿಸಿದೆ.

ರೈಲಿನಲ್ಲಿ ನಿಲ್ದಾಣಕ್ಕೆ ಬರುತ್ತಿದ್ದ ಶಾರುಖ್‌ ಖಾನ್‌ ನೋಡಲು ಸಾವಿರಾರು ಸಂಖ್ಯೆಯಲ್ಲಿ  ಜನರು ಜಮಾವಣೆಗೊಂಡಿದ್ದರು,  ಜನರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದು ಈ ವೇಳೆ ಕಾಲ್ತುಳಿತ ಸಂಭವಿಸಿದೆ. ವಡೋದರಾದ ಸಾಮಾಜಿಕ ಕಾರ್ಯಕರ್ತ ಫರೀದ್ ಖಾನ್ ಪತಾನ್ ತನ್ನ ಹೆಂಡತಿ ಹಾಗೂ ಮಗಳೊಂದಿಗೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಫರೀದ್ ಖಾನ್ ರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವಘಡದಲ್ಲಿ ಇಬ್ಬರು ಪೊಲೀಸ್ ಪೇದೆಗಳು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗ ಸೇರಿಸಲಾಗಿದೆ. ರಾಯಿಸ್ ಸಿನಿಮಾ ಪ್ರಚಾರಕ್ಕಾಗಿ ಅಗಸ್ತ್ ಕಾಂತ್ರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶಾರುಖ್‌ ಖಾನ್‌ ಅವರು ರೈಲು ನಿಲ್ದಾಣಗಳಲ್ಲಿ ಶಾರೂಖ್ ಪ್ರಚಾರ ನಡೆಸಿದ್ದಾರೆ.

ಇನ್ನು ಕಾಲ್ತುಳಿತದಲ್ಲಿ ಅಭಿಮಾನಿ ಸಾವನ್ನಪ್ಪಿರುವುದಕ್ಕೆ ನಟ ಶಾರುಖ್ ಖಾನ್ ವಿಷಾದ ವ್ಯಕ್ತ ಪಡಿಸಿದ್ದಾರೆ. ಅವರ ಸಾವು ದುರಾದೃಷ್ಟಕರ ಘಟನೆ, ನಮ್ಮ ಎಲ್ಲಾ ನಿಲ್ದಾಣಗಳಲ್ಲಿದ್ದು, .ಯಾರಿಗಾದರೂ ತೊಂದರೆಯಾದರೇ ಅವರೇ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ ಎಂದು ಶಾರುಖ್ ಹೇಳಿದ್ದಾರೆ.

ಶಾರುಖ್‌ರ ಬಹು ನಿರೀಕ್ಷಿತ ರಾಯೀಸ್ ಚಿತ್ರ ಜನವರಿ 25 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.