ದಾಖಲೆಯ 400 ಕೋಟಿ ಗಳಿಕೆಯತ್ತ ಅಮೀರ್ ಖಾನ್ "ದಂಗಲ್"
ಬಾಲಿವುಡ್ ನಟ ಅಮೀರ್ ಖಾನ್ ಅವರ ಚಿತ್ರ ದಂಗಲ್ ಚಿತ್ರ 375 ಕೋಟಿಗೂ ಅಧಿಕ ಗಳಿಕೆ ಕಾಣುವ ಮೂಲಕ ಬಾಲಿವುಡ್ ಬಾಕ್ಸ್ ಆಫೀಸ್ ನ ಎಲ್ಲ ದಾಖಲೆಗಳನ್ನು ಮುರಿದು 400 ಕೋಟಿ ರು.ಗಳಿಕೆಯತ್ತ ದಾಪುಗಾಲಿರಿಸಿದೆ.

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಅವರ ಚಿತ್ರ ದಂಗಲ್ ಚಿತ್ರ 375 ಕೋಟಿಗೂ ಅಧಿಕ ಗಳಿಕೆ ಕಾಣುವ ಮೂಲಕ ಬಾಲಿವುಡ್ ಬಾಕ್ಸ್ ಆಫೀಸ್ ನ ಎಲ್ಲ ದಾಖಲೆಗಳನ್ನು ಮುರಿದು 400 ಕೋಟಿ ರು.ಗಳಿಕೆಯತ್ತ ದಾಪುಗಾಲಿರಿಸಿದೆ.
ಬಾಲಿವುಡ್ ಬಾಕ್ಸ್ ಆಫೀಸ್ ತಜ್ಞರು ನೀಡಿರುವ ಮಾಹಿತಿಯಂತೆ ದಂಗಲ್ ಬಿಡುಗಡೆಯಾದ ದಿನದಿಂದ ಈ ವರೆಗೂ ಸುಮಾರು 375 ಕೋಟಿಗೂ ಅಧಿಕ ಹಣ ಸಂಪಾದನೆ ಮಾಡಿದ್ದು, 400 ಕೋಟಿ ರು.ಕ್ಲಬ್ ನತ್ತ ದಾಪುಗಾಲಿರಿಸಿದೆ. ಆ ಮೂಲಕ 400 ಕೋಟಿ ಕ್ಲಬ್ ಸೇರುವ ಭಾರತದ ಮೊದಲ ಸಿನಿಮಾ ಎಂಬ ಖ್ಯಾತಿಗೆ ದಂಗಲ್ ಪಾತ್ರವಾಗಲಿದೆ.
ದಂಗಲ್ ಚಿತ್ರ ಬಿಡುಗಡೆಯಾದ 3ನೇ ದಿನಕ್ಕೇ 100 ಕೋಟಿ ಗಳಿಕೆ ಕಂಡಿತ್ತು. ಅಂತೆಯೇ 5ನೇ ದಿನಕ್ಕೆ 150 ಕೋಟಿ, 8ನೇ ದಿನಕ್ಕೆ 200 ಕೋಟಿ, 13ನೇ ದಿನಕ್ಕೆ 300 ಕೋಟಿ ಮತ್ತು 19ನೇ ದಿನಕ್ಕೆ 350 ಕೋಟಿ ರು.ಗಳಿಕೆ ಕಂಡಿತ್ತು. ಇದೀಗ 29ನೇ ದಿನದ ವೇಳೆಗೆ 375 ಕೋಟಿ ರು.ಗಳಿಕೆ ಕಂಡಿದ್ದು, 400 ಕೋಟಿ ರು.ಗಳತ್ತ ಮುನುಗ್ಗುತ್ತಿದೆ. ದಂಗಲ್ ಚಿತ್ರ ಅಂತಾರಾಷ್ಟ್ರೀಯವಾಗಿ 29 ಮಿಲಿಯನ್ ಡಾಲರ್ ಗಳಿಕೆ ಕಂಡಿದ್ದು, ಜನವರಿ 20ರ ಹೊತ್ತಿಗೆ ಈ ಗಳಿಕೆ 29.04 ಮಿಲಿಯನ್ ಡಾಲರ್ ಗೇರಿತ್ತು. ಈ ಪೈಕಿ ಅಮೆರಿಕದ ಕೆನಡಾ ಒಂದರಲ್ಲೇ 12 ಮಿಲಿಯನ್ ಡಾಲರ್ ಗಳಿಕೆ ಕಂಡಿದೆ ಎಂದು ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ,
ಒಟ್ಟಾರೆ ಕಳೆದ ವರ್ಷಾಂತ್ಯದಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ದಂಗಲ್ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಾಲಿವುಡ್ ಚಿತ್ರಗಳಿಗೂ ಪೈಪೋಟಿ ನೀಡುತ್ತಿದೆ.
#Dangal crosses $ 29 million internationally... OVERSEAS - Till 20 Jan: $ 29.04 million [₹ 197.70 cr]... USA-Canada crosses $ 12 million
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


