ಬಾಲಿವುಡ್

ಅಮಿತಾಬ್ ಬಚ್ಚನ್ ಭಾರತದ ಅತಿ ದೊಡ್ಡ ನಟ: ರಿಷಿ ಕಪೂರ್

ಬಾಲಿವುಡ್‌ ಮೆಗಾಸ್ಟಾರ್ ಅಮಿತಾಬ್‌ ಬಚ್ಚನ್‌ ಭಾರತದ ಶ್ರೇಷ್ಠ ಕಲಾವಿದ ಎಂದು ನಟ ರಿಷಿ ಕಪೂರ್ ಹಾಡಿ...

ಅಮಿತಾಬ್ ಬಚ್ಚನ್ ಭಾರತದ ಅತಿ ದೊಡ್ಡ ನಟ: ರಿಷಿ ಕಪೂರ್
ಅಮಿತಾಬ್ ಬಚ್ಚನ್
Published On :

ನವದೆಹಲಿ: ಬಾಲಿವುಡ್‌ ಮೆಗಾಸ್ಟಾರ್ ಅಮಿತಾಬ್‌ ಬಚ್ಚನ್‌ ಭಾರತದ ಶ್ರೇಷ್ಠ ಕಲಾವಿದ ಎಂದು ನಟ ರಿಷಿ ಕಪೂರ್ ಹಾಡಿ ಹೊಗಳಿದ್ದಾರೆ.

ರಿಷಿ ಕಪೂರ್ ತಮ್ಮ ಜೀವನ ಚರಿತ್ರೆ "ಖುಲ್ಲಂ ಖುಲ್ಲಾ ರಿಷಿ ಕಪೂರ್ ಅನ್ಸೆನ್ಸಾರ್ಡ್" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಮಿತಾಬ್‌ ಬಚ್ಚನ್‌ ಮತ್ತು ರಿಷಿ ಕಪೂರ್‌ ನಡುವಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

1970– 80ರ ದಶಕದಲ್ಲಿ ಅಮಿತಾಬ್‌ ಬಚ್ಚನ್‌ ಅವರು ಅನುಸರಿಸಿದ ಹೊಸ ನಟನಾ ಪ್ರವೃತ್ತಿಯೇ ಅವರ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು . 1970– 80 ದಶಕದ ಸಿನಿಮಾರಂಗದ ಹಿನ್ನೋಟವನ್ನು ನೆನಪಿಸಿಕೊಂಡ ರಿಷಿ ಕಪೂರ್‌, ನಟನೆಗೆ ಸಂಬಂಧಿಸಿದಂತೆ ಸಹ ಕಲಾವಿದರು, ತಾರೆಯರು ಅಮಿತಾಬ್‌ ಬಚ್ಚನ್‌ ಅವರು ನಡೆದ ಹಾದಿಯನ್ನು ಅನುಸರಿಸುತ್ತಿದ್ದರು ಎಂದು ಹೇಳಿದ್ದಾರೆ.

ಹೆಚ್ಚು ಉಲ್ಲಸಿತನಾಗಿ, ಅತಿ ಆಸಕ್ತಿಯಿಂದ ನನ್ನ ಕೆಲಸದಲ್ಲಿ ಮಗ್ನನಾಗುತ್ತಿದ್ದೆ. ಅದೇ ಉತ್ಸಾಹವೇ ನನ್ನ ನಟನೆಯ ಯಶಸ್ಸಿಗೆ ಕಾರಣವಾಯಿತು ಎಂದು ಹೇಳಿರುವ ರಿಷಿಕಪೂರ್ ಅಮಿತಾಬ್‌ ಬಚ್ಚನ್‌ ಅವರೊಂದಿಗೆ ‘ಕಭೀ ಕಭೀ’, ‘ಅಮರ್ ಅಕ್ಬರ್ ಅಂತೋನಿ’, ‘ನಸೀಬ್’ ಚಿತ್ರಗಳಲ್ಲಿ ಅಭಿನಯಿಸಿರುವುದಾಗಿ ತಿಳಿಸಿದ್ದಾರೆ. ಅಮಿತಾಬ್ ಬಚ್ಚನ್ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಟಾಪ್ ಮೋಸ್ಟ್ ನಟರಾದರು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.