ತಮ್ಮದೇ ಮೇಣದ ಪ್ರತಿಮೆಯನ್ನು ನೋಡಿ ಫೋಟೋ ಎಂದುಕೊಂಡ ಬಿಗ್ ಬೀ!
ಮ್ಯಾಡಮ್ ಟ್ಯುಸಾಡ್ ಮ್ಯೂಸಿಯಂ ಜುಲೈ ನಲ್ಲಿ ಉದ್ಘಾಟನೆಯಾಗಲಿದ್ದು, ಮ್ಯೂಸಿಯಂ ನಲ್ಲಿರುವ ತಮ್ಮ ಮೇಣದ ಪ್ರತಿಮೆಯ ಫೋಟೋ ನೋಡಿರುವ ಅಮಿತಾಬ್ ಬಚ್ಚನ್ ಅದನ್ನು ತಮ್ಮದೇ ನಿಜವಾದ ಫೋಟೊ ಎಂದುಕೊಂಡಿದ್ದರಂತೆ.

Published On :
ನವದೆಹಲಿ: ಮ್ಯಾಡಮ್ ಟ್ಯುಸಾಡ್ ಮ್ಯೂಸಿಯಂ ಜುಲೈ ನಲ್ಲಿ ಉದ್ಘಾಟನೆಯಾಗಲಿದ್ದು, ಮ್ಯೂಸಿಯಂ ನಲ್ಲಿರುವ ತಮ್ಮ ಮೇಣದ ಪ್ರತಿಮೆಯ ಫೋಟೋ ನೋಡಿರುವ ಬಿಗ್ ಬೀ ಅಮಿತಾಬ್ ಬಚ್ಚನ್ ಅದನ್ನು ತಮ್ಮದೇ ನಿಜವಾದ ಫೋಟೊ ಎಂದುಕೊಂಡಿದ್ದರಂತೆ.
ಈ ಬಗ್ಗೆ ಸ್ವತಃ ಬಿಗ್ ಬೀ ಟ್ವೀಟ್ ಮಾಡಿದ್ದು, ನವದೆಹಲಿಯಲ್ಲಿರುವ ಮ್ಯಾಡಮ್ ಟ್ಯುಸಾಡ್ ಮ್ಯೂಸಿಯಂ ನಲ್ಲಿರುವ ಪ್ರತಿಮೆಯ ಫೋಟೊವನ್ನು ಕಂಡು ಅದು ನನ್ನ ನಿಜವಾದ ಫೋಟೊ ಎಂದುಕೊಂಡಿದ್ದೆ ಎಂದು ಟ್ವೀಟ್ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಅವರ ತದ್ರೂಪಿ ಮೇಣದ ಪ್ರತಿಮೆಯ ಫೋಟೋವನ್ನು ಎಎನ್ಐ ಟ್ವೀಟ್ ಮಾಡಿತ್ತು, ಎಎನ್ಐ ಟ್ವೀಟ್ ಗೆ ಅಮಿತಾಬ್ ಬಚ್ಚನ್ ಅಭಿಮಾನಿಗಳು ಹಾಗೂ ಸ್ವತಃ ಅಮಿತಾಬ್ ಬಚ್ಚನ್ ರಿಟ್ವೀಟ್ ಮಾಡಿದ್ದಾರೆ.
ನವದೆಹಲಿಯಲ್ಲಿ ಜುಲೈ ತಿಂಗಳಲ್ಲಿ ಉದ್ಘಾಟನೆಯಾಗಲಿರುವ ಮ್ಯಾಡಮ್ ಟ್ಯುಸಾಡ್ ಮ್ಯೂಸಿಯಂ ದೇಶದ ಮೊದಲ ಶಾಖೆಯಾಗಿದ್ದು, ವಿಶ್ವದ 23 ನೇ ಶಾಖೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿAmitabh Bachchanಅಮಿತಾಬ್ ಬಚ್ಚನ್Delhiಮೇಣದ ಪ್ರತಿಮೆwax statueMadame tussauds museumಮ್ಯಾಡಮ್ ಟ್ಯುಸಾಡ್ ಮ್ಯೂಸಿಯಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


