ಬಾಲಿವುಡ್

2017ರ ಮೊದಲ ತಾರಾ ವಿಚ್ಛೇದನ: ಖಚಿತಪಡಿಸಿದ ನಟಿ ನಂದಿತಾ ದಾಸ್

ನಟಿ ನಂದಿತಾ ದಾಸ್ ಅವರು ತಮ್ಮ ಪತಿ ಉದ್ಯಮಿ ಹಾಗೂ ನಟ ಸುಬೋಧ್ ಮಸ್ಕರ ಅವರೊಂದಿಗೆ ಏಳು ವರ್ಷಗಳ ದಾಂಪತ್ಯ...

2017ರ ಮೊದಲ ತಾರಾ ವಿಚ್ಛೇದನ: ಖಚಿತಪಡಿಸಿದ ನಟಿ ನಂದಿತಾ ದಾಸ್
ನಂದಿತಾ ದಾಸ್
Published On :
ನಟಿ ನಂದಿತಾ ದಾಸ್ ಅವರು ತಮ್ಮ ಪತಿ ಉದ್ಯಮಿ ಹಾಗೂ ನಟ ಸುಬೋಧ್ ಮಸ್ಕರ ಅವರೊಂದಿಗೆ ಏಳು ವರ್ಷಗಳ ದಾಂಪತ್ಯ ಜೀವನದಿಂದ ಪ್ರತ್ಯೇಕವಾಗಲು ನಿರ್ಧರಿಸಿರುವುದಾಗಿ ಸೋಮವಾರ ಹೇಳಿಕೊಂಡಿದ್ದಾರೆ.
ಪರಸ್ಪರ ಒಪ್ಪಿಗೆಯಿಂದ ನಾನು ಮತ್ತು ಸುಬೋಧ್ ಬೇರೆಯಾಗಲು ನಿರ್ಧರಿಸಿದ್ದು, ನಮ್ಮ ಮಗನ ಭವಿಷ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
'ಮಗನ ಭವಿಷ್ಯ ನಮ್ಮಿಬ್ಬರ ಮೊದಲ ಆದ್ಯತೆಯಾಗಿದ್ದು, ಅವನ ಯೋಗಕ್ಷೇಮಕ್ಕೆ ನಾವು ಬದ್ಧರಾಗಿದ್ದೇವೆ ಮತ್ತು ಇದೇ ವೇಳೆ ನಮ್ಮ ಖಾಸಗಿತನವನ್ನು ಗೌರವಿಸುವ ವಿಶ್ವಾಸವಿದೆ' ನಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂದಿತಾ ಅವರು 2002ರಲ್ಲಿ ಮೊದಲ ಬಾರಿಗೆ ಸೌಮ್ಯ ಸೇನ್ ಅವರೊಂದಿಗೆ ವಿವಾಹವಾಗಿದ್ದರು. ನಂತರ 2007ರಲ್ಲಿ ಅವರಿಗೆ ವಿಚ್ಛೇದನ ನೀಡಿ, 2010ರಲ್ಲಿ ಸುಬೋಧ್ ಅವರೊಂದಿಗೆ ಎರಡನೇ ಮದುವೆಯಾಗಿದ್ದರು. ಈ ದಂಪತಿಗೆ ಆರು ವರ್ಷದ ವಿಹಾನ್ ಎಂಬ ಮಗನಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.