ಕಪಿಲ್ ಶರ್ಮಾ ಶೋನಲ್ಲಿ ಅಜಯ್ ದೇವಗನ್ ಕುಚೇಷ್ಟೆ
ತೀವ್ರ ತುಡಿತ ಹೊಂದಿರುವ ನಟ ಅಜಯ್ ದೇವಗನ್ ತಮ್ಮ ಮಹಾತ್ವಾಕಾಂಕ್ಷಿ ಚಿತ್ರ ಶಿವಾಯ್ ನ...

Published On :
ನವದೆಹಲಿ: ತೀವ್ರ ತುಡಿತ ಹೊಂದಿರುವ ನಟ ಅಜಯ್ ದೇವಗನ್ ತಮ್ಮ ಮಹಾತ್ವಾಕಾಂಕ್ಷಿ ಚಿತ್ರ ಶಿವಾಯ್ ನ ಪ್ರಚಾರ ಮತ್ತು ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಅದರ ಭಾಗವಾಗಿ ಕಪಿಲ್ ಶರ್ಮಾರ ಕಾಮಿಡಿ ಕಿಂಗ್ ಷೋಗೆ ಅಜಯ್ ದೇವಗನ್ ಮತ್ತು ಕಾಜೋಲ್ ಬಂದಿದ್ದರು.
ಕಪಿಲ್ ಶರ್ಮಾ ಷೋ ಎಂದ ಮೇಲೆ ಅಲ್ಲಿ ನಗು, ತಮಾಷೆ, ಹರಟೆಗೆ ಕೊರತೆಯಿಲ್ಲ. ಷೋವಿನ ಕೆಲವು ಚಿತ್ರಗಳು ಇಂಟರ್ನೆಟ್ ನಲ್ಲಿ ವೈರಲ್ ಆದ ನಂತರ ಅಜಯ್ ದೇವಗನ್ ತಾವೇ ಸ್ವತಃ ಷೋದ ಸಣ್ಣ ವಿಡಿಯೋ ತುಣುಕನ್ನು ಟ್ವಿಟ್ಟರ್ ನಲ್ಲಿ ಷೇರ್ ಮಾಡಿದ್ದು ಅದರಲ್ಲಿ ಅಜಯ್ ಕಪಿಲ್ ಮತ್ತು ಚಂದು ಜೊತೆ ತುಂಬಾ ಸುಂದರವಾದ ಕುಚೇಷ್ಟೆಯೊಂದನ್ನು ಮಾಡಿದ್ದಾರೆ. ವಿಡಿಯೋ ನೋಡಿದವರಿಗೆ ಖಂಡಿತವಾಗಿಯೂ ಹೊಟ್ಟೆ ಹುಣ್ಣಾಗುವಷ್ಟು ನಗು ಬರದೆ ಇರದು.
ಈ ಶೋ ಮುಂದಿನ ವಾರ ಪ್ರಸಾರವಾಗಲಿದೆ. ಶಿವಾಯ್ ಚಿತ್ರ ಈ ದೀಪಾವಳಿಗೆ ಅಕ್ಟೋಬರ್ 28ರಂದು ತೆರೆ ಕಾಣಲಿದೆ. ಶಿವಾಯ್ ಚಿತ್ರದಲ್ಲಿ ಅಜಯ್ ದೇವಗನ್ ನಿರ್ದೇಶಿಸಿ ನಟಿಸಿದ್ದಾರೆ ಕೂಡ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


