ಬಾಲಿವುಡ್

ಪಾಕ್‌ಗೆ ತೆರಳಿ ಪ್ರಧಾನಿ ನವಾಜ್ ಷರೀಫ್‌ರನ್ನು ಭೇಟಿ ಮಾಡಿದ್ದ ಮೋದಿ ಕ್ಷಮೆಯಾಚಿಸಿದ್ರಾ?: ಕಶ್ಯಪ್

ನಿರ್ದೇಶಕ ಕರಣ್ ಜೋಹಾರ್ ನಿರ್ದೇಶನದ ಯೇ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಪಾಕಿಸ್ತಾನ ನಟ ಪವಾದ್ ಖಾನ್ ನಟಿಸಿರುವುದಕ್ಕೆ ನಿರ್ದೇಶಕ ಕರಣ್ ಕ್ಷಮೆಯಾಚಿಸಬೇಕಾ ಎಂದು...

ಪಾಕ್‌ಗೆ ತೆರಳಿ ಪ್ರಧಾನಿ ನವಾಜ್ ಷರೀಫ್‌ರನ್ನು ಭೇಟಿ ಮಾಡಿದ್ದ ಮೋದಿ ಕ್ಷಮೆಯಾಚಿಸಿದ್ರಾ?: ಕಶ್ಯಪ್
ಅನುರಾಗ್ ಕಶ್ಯಪ್
Published On :
ನಿರ್ದೇಶಕ ಕರಣ್ ಜೋಹಾರ್ ನಿರ್ದೇಶನದ ಯೇ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಪಾಕಿಸ್ತಾನ ನಟ ಪವಾದ್ ಖಾನ್ ನಟಿಸಿರುವುದಕ್ಕೆ ನಿರ್ದೇಶಕ ಕರಣ್ ಕ್ಷಮೆಯಾಚಿಸಬೇಕಾ ಎಂದು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ. 
ತಮ್ಮ ಚಿತ್ರದಲ್ಲಿ ಪಾಕ್ ನಟ ನಟಿಸಿರುವುದಕ್ಕೆ ಕರಣ್ ಜೋಹಾರ್ ಕ್ಷಮೆಯಾಚಿಸಬೇಕಾ ಎಂದು ಪ್ರಶ್ನಿಸಿರುವ ಅನುರಾಗ್ ಕಶ್ಯಪ್ ಪ್ರಧಾನಿ ಮೋದಿ ಅವರು ಲಾಹೋರ್ ಗೆ ತೆರಳಿ ಪಾಕ್ ಪ್ರಧಾನಿ ನವಾಜ್ ಷರೀಫ್ ರನ್ನು ಭೇಟಿಯಾಗಿ ಬಂದ ಮೇಲೆ ಕ್ಷಮೆಯಾಚಿಸಿದ್ದರಾ ಎಂದು ಪ್ರಶ್ನಿಸಿದ್ದಾರೆ. 
ಪಾಕಿಸ್ತಾನ ನಟ ಫವಾದ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಯೇ ದಿಲ್ ಹೈ ಮುಷ್ಕಿಲ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದರೂ ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಬೇಕು ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾರತದ ಚಿತ್ರಮಂದಿರ ಮಾಲೀಕರು ಮತ್ತು ಪ್ರದರ್ಶಕರ ಸಂಘ(ಸಿಒಇಎಐ) ಪಾಕಿಸ್ತಾನ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರು ಪಾಲ್ಗೊಂಡಿರುವ ಚಿತ್ರಗಳಿಗೆ ಬಿಡುಗಡೆಗೆ ಅವಕಾಶವಿಲ್ಲ ಎಂದು ಹೇಳಿತ್ತು.
ಮುಷ್ಕಿಲ್ ಚಿತ್ರದ ಜತೆಗೆ ಶಾರುಖ್ ಖಾನ್ ಅಭಿನಯದ ರಯೀಸ್ ನಲ್ಲಿ ಪಾಕ್ ಮೂಲದ ಮಾಹೀರಾ ಖಾನ್ ನಟಿಸಿದ್ದಾರೆ ಎಂಬ ಕಾರಣಕ್ಕೆ ಆ ಚಿತ್ರದ ರಿಲೀಸ್ ಗೂ ತಡೆ ಬೀಳಬಹುದು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.