ಬಾಲಿವುಡ್

ನಾನು ಮತ್ತು ಶ್ರೇಯಾ ಒಳ್ಳೆಯ ಸ್ನೇಹಿತರಷ್ಟೇ, ಬೇರೇನೂ ಇಲ್ಲ: ಬ್ರಾವೋ

ವಿಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೊರೊಂದಿಗಿನ ಸ್ನೇಹ-ಸಂಬಂಧ ಕುರಿತಂತೆ ಹಬ್ಬಿರುವ ಊಹಾಪೋಹಗಳಿಗೆ ತೆರೆ ಎಳೆಯಲೆತ್ನಿಸಿರುವ ಕ್ರಿಕೆಟಿಗ ಬ್ರಾವೋ ನಾವಿಬ್ಬರು ಕೇವಲ ಒಳ್ಳೆಯ ಸ್ನೇಹಿತರಷ್ಟೇ ಎಂದು ಹೇಳಿದ್ದಾರೆ.

ನಾನು ಮತ್ತು ಶ್ರೇಯಾ ಒಳ್ಳೆಯ ಸ್ನೇಹಿತರಷ್ಟೇ, ಬೇರೇನೂ ಇಲ್ಲ: ಬ್ರಾವೋ
ಡ್ವೇಯ್ನ್ ಬ್ರಾವೋ ಹಾಗೂ ನಟಿ ಶ್ರೇಯಾ ಶರಣ್ (ಸಂಗ್ರಹ ಚಿತ್ರ)
Published On :

ಮುಂಬೈ: ನಟಿ ಶ್ರೇಯಾ ಶರಣ್ ರೊಂದಿಗಿನ ಸ್ನೇಹ-ಸಂಬಂಧ ಕುರಿತಂತೆ ಹಬ್ಬಿರುವ ಊಹಾಪೋಹಗಳಿಗೆ ತೆರೆ ಎಳೆಯಲೆತ್ನಿಸಿರುವ ಕ್ರಿಕೆಟಿಗ ಬ್ರಾವೋ ನಾವಿಬ್ಬರು ಕೇವಲ  ಒಳ್ಳೆಯ ಸ್ನೇಹಿತರಷ್ಟೇ ಎಂದು ಹೇಳಿದ್ದಾರೆ.

ಇತ್ತೀಚೆಗೆ ಖಾಸಗಿ ಪಾರ್ಟಿಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಶ್ರೇಯಾ ಶರಣ್ ಹಾಗೂ ವಿಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ಕುರಿತಂತೆ ಭಾರಿ ಗಾಸಿಪ್ ಗಳು ಹರಿದಾಡುತ್ತಿವೆ. ನಟಿ  ಶ್ರೇಯಾ ಹಾಗೂ ಬ್ರಾವೋ ಡೇಟಿಂಗ್ ನಲ್ಲಿ ತೊಡಗಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ನಲ್ಲಿ ಹರಿದಾಡಿದ್ದವು.

ಇದೀಗ ಆ ಎಲ್ಲ ಊಹಾಪೋಹಗಳಿಗೆ ಸ್ವತಃ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ತೆರೆ ಎಳೆಯಲೆತ್ನಿಸಿದ್ದು, ತಾನು ಮತ್ತು ಶ್ರೇಯಾ ಉತ್ತಮ ಸ್ನೇಹಿತರಾಗಿದ್ದೇವೆ. ಇದನ್ನು ಹೊರತು ಪಡಿಸಿ ನಮ್ಮನಡುವೆ  ಅಂತಹ ಯಾವುದೇ ಸಂಬಂಧಗಳಿಲ್ಲ ಎಂದು ಹೇಳಿದ್ದಾರೆ.

ಇದೇ ಮೊದಲ ಬಾರಿ ನಾನು ಕೆಲಸದ ನಿಮಿತ್ತ ಶ್ರಿಯಾ ಜತೆಗೆ ಹೊರಗಡೆ ಹೋಗಿದ್ದೆ. ಇದನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡಲಾಗಿದೆ. ನಮ್ಮಿಬ್ಬರ ನಡುವೆ ನೀವಂದುಕೊಂಡಂತೆ ಏನು ಇಲ್ಲ.  ಅವಳು ನನ್ನ ಉತ್ತಮ ಸ್ನೇಹಿತೆ. ಬಾಲಿವುಡ್ ನಲ್ಲಿಯೂ ನನಗೆ ಸಾಕಷ್ಚು ಮಂದಿ ಸ್ನೇಹಿತರಿದ್ದಾರೆ. ಹೀಗಾಗಿ ಯಾರೊಂದಿಗೂ ನನ್ನ ಹೆಸರು ತಳಕುಹಾಕುವುದು ನನಗಿಷ್ಟವಿಲ್ಲ ಎಂದು ಬ್ರಾವೋ  ಹೇಳಿದ್ದಾರೆ.

ಇದೇ ವೇಳೆ  ಎಂಎಸ್ ಧೋನಿಯಂತೆ ನಿಮ್ಮ ಬಯೋ ಪಿಕ್ ಮಾಡಲು ಇಚ್ಛಿಸುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬ್ರಾವೋ ನಾನು ಕೂಡ ಕಷ್ಟದಿಂದಲೇ ಮೇಲೆ ಬಂದವನು. ಸಾಕಷ್ಟು  ಹೋರಾಟದ ನಡುವೆ ನಾನು ಈ ಸ್ಥಾನಕ್ಕೇರಿದ್ದೇನೆ. ನಮ್ಮದು ಬಡ ಕುಟುಂಬವಾಗಿದ್ದು, ಮಕ್ಕಳಿಗಾಗಿ ಪಾಲಕರು ಅಪಾರ ತ್ಯಾಗ ಮಾಡಿದ್ದಾರೆ. ವಿಶ್ವದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರ  ಬಯೋಪಿಕ್ ಬರಬೇಕೆಂದು ಹೇಳಿದರು.

ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ಬ್ರಾವೋ ಐಪಿಎಲ್ ಹಾಗೂ ದಿ ಚಾಂಪಿಯನ್ ಡಾನ್ಸ್ ಗೀತೆಯ ಮೂಲಕ ಭಾರತದಲ್ಲಿ ಖ್ಯಾತಿ ಗಳಿಸಿದ್ದರು. ಪ್ರಸ್ತುತ ಖಾಸಗಿ  ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಳ್ಳಲು ಬ್ರಾವೋ ಭಾರತಕ್ಕೆ ಆಗಮಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.